ವಾಷಿಂಗ್ಟನ್:ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯರೊಬ್ಬರು "ಹವಾನಾ ಸಿಂಡ್ರೋಮ್" ಎಂದು ಕರೆಯಲ್ಪಡುವ ರೋಗದ ಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದ ಬಳಿಕ ಮತ್ತೆ ಈ ರೋಗದ ಲಕ್ಷಣಗಳು ಕಂಡು ಬಂದಿದೆ. ವಾಷಿಂಗ್ಟನ್ ಡಿ.ಸಿ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಈ ರೋಗ ಲಕ್ಷಣಗಳು ಕಂಡು ಬಂದಿರುವುದು ಎರಡನೇ ಪ್ರಕರಣವಾಗಿದೆ.
2019 ರಲ್ಲಿ, ಯುಎಸ್ ಮಿಲಿಟರಿಯ ಸದಸ್ಯರೊಬ್ಬರು ಉದ್ರೇಕದಿಂದ ತಮ್ಮ ಕಾರಿನಲ್ಲಿ ಕುಳಿತಾಗ ಅವರಿಗೆ ತೀವ್ರ ವಾಕರಿಕೆ ಮತ್ತು ತಲೆನೋವಿನ ಲಕ್ಷಣಗಳು ಕಂಡು ಬಂತು. ಬಳಿಕ ಅಲ್ಲಿಂದ ಹೊರಬಂದಾಗ ಲಕ್ಷಣಗಳು ತಕ್ಷಣವೇ ಮರೆಯಾಯಿತು. ಆದರೆ, ಆ ಬಳಿಕ ಅಧಿಕಾರಿ ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟರೆಂದು ಹೇಳಲಾಗಿದೆ.
"ಹವಾನಾ ಸಿಂಡ್ರೋಮ್" ಕ್ಯೂಬಾದಲ್ಲಿ ಮೊದಲ ಬಾರಿಗೆ ಗಮನಕ್ಕೆ ಬಂದಿದೆ. ಅಂದಿನಿಂದ, ಅಲ್ಲಿ ನೆಲೆಗೊಂಡಿರುವ 130ಕ್ಕೂ ಹೆಚ್ಚು ಯುಎಸ್ ಮತ್ತು ಕೆನಡಾದ ರಾಜತಾಂತ್ರಿಕರು, ಗೂಢಾಚಾರರು ಮತ್ತು ಸೈನಿಕರಿಗೆ ಈ ರೋಗ ಲಕ್ಷಣಗಳು ಕಂಡು ಬಂದಿದೆ.
ಆಗ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಕ್ಯೂಬನ್ ಸರ್ಕಾರವನ್ನು ದೂಷಿಸಿದ್ದರು., ಪೆಂಟಗನ್‌ನಲ್ಲಿ ಕೆಲವರು ರಷ್ಯಾ ದೂಷಿಸಿದರು. ಆದರೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಯಾವುದೇ ಜವಾಬ್ದಾರಿಯನ್ನು ವಹಿಸಲಿಲ್ಲ. ಇದೀಗ ಜೋ ಬೈಡನ್ ಸರ್ಕಾರ ಈ ರೋಗದ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.
ಬೈಡೆನ್ ಆಡಳಿತವು ಸಿಬ್ಬಂದಿಗಳ ಈ ಸಮಸ್ಯೆಯ ಬಗ್ಗೆ ಅತ್ಯಂತ ಗಂಭೀರವಾಗಿ ವರದಿ ಮಾಡುತ್ತಿದೆ. ಯುಎಸ್ ಸೆನೆಟ್ ಗುಪ್ತಚರ ಸಮಿತಿಯ ನಾಯಕರ ದ್ವಿಪಕ್ಷೀಯ ಗುಂಪು ಕಳೆದ ತಿಂಗಳು ನಡೆದ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ಧರಿಸಿದೆ.