ವಾಷಿಂಗ್ಟನ್: ಸಂಸದರೊಬ್ಬರು ಮಂಗಳವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶದ ಸಂಬಂಧಗಳನ್ನು ಬಲಪಡಿಸುವ ಮಸೂದೆಯೊಂದನ್ನು ಮಂಡಿಸಿದ್ದಾರೆ.
ಇಂಡೋ - ಪೆಸಿಫಿಕ್ ದೇಶಗಳೊಂದಿಗೆ ತನ್ನ ಸಂಬಂಧ ಬಲಪಡಿಸಿಕೊಳ್ಳುತ್ತಿರುವ ಅಮೆರಿಕ - ಹಿಂದೂ ಮಹಾಸಾಗರ ಪ್ರದೇಶ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಈಗಾಗಲೇ ಇಂಡೋ - ಪೆಸಿಫಿಕ್ನ ಪ್ರಮುಖ ಮಿತ್ರ ದೇಶಗಳೊಂದಿಗೆ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಹೊಂದಿದ್ದು, ಇದೀಗ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಸೂದೆಯೊಂದನ್ನು ಮಂಡಿಸಲಾಗಿದೆ.
ಅಮೆರಿಕದ ರಾಜಕೀಯ ಸಂಬಂಧವನ್ನು ಉತ್ತೇಜಿಸುವ ಸಲುವಾಗಿ ಮತ್ತು ಖಾಸಗಿ ವಲಯಗಳನ್ನು ಒಳಗೊಂಡಂತೆ ಹಿಂದೂ ಮಹಾಸಾಗರ ಪ್ರದೇಶದ ದೇಶಗಳೊಂದಿಗೆ ಸಂಬಂಧವನ್ನು ಬಲಪಡಿಸುವುದು ಅಮೆರಿಕದ ನೀತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಈಗಾಗಲೇ ಇಂಡೋ-ಪೆಸಿಫಿಕ್ನ ಪ್ರಮುಖ ಮಿತ್ರ ದೇಶಗಳೊಂದಿಗೆ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಹೊಂದಿದ್ದು, ಈ ಸಂಬಂಧವನ್ನು ಮುಂದುವರೆಸುವಂತೆ ಮಸೂದೆಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ನ ಜೊವಾಕ್ವಿನ್ ಕ್ಯಾಸ್ಟ್ರೊ ಪರಿಚಯಿಸಿದ ಈ ಮಸೂದೆಯಲ್ಲಿ, ಕೆಲ ಒಪ್ಪಂದಗಳು ಮತ್ತು ಮಾತುಕತೆಯ ಮೂಲಕ ಭದ್ರತಾ ಸಹಕಾರವನ್ನು ನೀಡುವ ಸಲುವಾಗಿ ಅಮೆರಿಕ ಭಾರತದ ಜೊತೆಗೆಗಿನ ಸಂಬಂಧವನ್ನು ಮುಂದುವರೆಸಬೇಕೆಂಬ ವಿಚಾರವನ್ನು ಮಂಡಿಸಲಾಗಿದೆ. ಅಷ್ಟೇ ಅಲ್ಲ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಇಂಡೋ - ಪೆಸಿಫಿಕ್ನಲ್ಲಿನ ಮಿತ್ರರಾಷ್ಟ್ರಗಳೊಂದಿಗೆ ಅಮೆರಿಕದ ಸಹಕಾರವನ್ನು ಉತ್ತೇಜಿಸಲು ಇದು ಉಪಕಾರಿ ಎಂದು ತಿಳಿಸಲಾಗಿದೆ.