ವಾಷಿಂಗ್ಟನ್ :ಕೋವಿಡ್ ಹೊಸ ರೂಪಾಂತರಿ ಒಮಿಕ್ರಾನ್ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಅಮೆರಿಕಾದಲ್ಲಿ ಈ ವೈರಸ್ ಹಡುವಿಕೆ ಆರು ಪಟ್ಟು ಹೆಚ್ಚಾಗಿದೆ. ಕೊರೊನಾ ಪ್ರಕರಣ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 81ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಇದರಲ್ಲಿ ಹೆಚ್ಚಿನ ಮಂದಿ ಒಮಿಕ್ರಾನ್ ಸೋಂಕಿತರಾಗಿದ್ದಾರೆ. ಇನ್ನು, 1,811 ಸೋಂಕಿತರು ಮೃತಪಟ್ಟಿದ್ದಾರೆ.
ಒಮಿಕ್ರಾನ್ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಸಿದ್ಧವಾಗಿದೆ. 50 ಕೋಟಿ ಕ್ಷಿಪ್ರ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು.
ಲಸಿಕೆ ಡೋಸ್‌ಗಳನ್ನು ಹೆಚ್ಚಿಸುತ್ತಿದ್ದು, ವ್ಯಾಕ್ಸಿನೇಷನ್‌ಗಾಗಿ ಆಸ್ಪತ್ರೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಲಸಿಕೆ ಪಡೆಯುವುದು ಪ್ರತಿಯೊಬ್ಬ ಅಮೆರಿಕ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.