ಫಿಲಡೆಲ್ಫಿಯಾ( ಅಮೆರಿಕ): ಡೇಟಿಂಗ್ ಸೈಟ್ಗಳು, ಲೈಂಗಿಕ ಸಂಬಂಧಿತ ಉತ್ಪನ್ನಗಳ ಜಾಹೀರಾತುಗಳಲ್ಲಿ ಅನಧಿಕೃತವಾಗಿ ಆ್ಯಂಕರ್ (Newscaster) ಚಿತ್ರ ಬಳಸಿದ್ದಕ್ಕಾಗಿ ಫೇಸ್‌ಬುಕ್ ವಿರುದ್ಧ ದಾಖಲಾಗಿದ್ದ ಪ್ರಕರಣ ಮರುಜೀವ ಪಡೆದಿದೆ. ಈ ಸಂಬಂಧ ಫೆಡರಲ್ ಮೇಲ್ಮನವಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ನನ್ನ ಅನುಮತಿ ಇಲ್ಲದೇ, ಜಾಹೀರಾತುಗಳಲ್ಲಿ ಭಾವಚಿತ್ರ ಬಳಸಿಕೊಂಡಿರುವುದರಿಂದ ನನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಫಾಕ್ಸ್ - 29 ನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕರೆನ್ ಹೆಪ್ ಹೇಳಿದ್ದಾರೆ.
ಈ ಮೊಕದ್ದಮೆ ಸಂವಹನ ಸಭ್ಯತೆ ಕಾಯಿದೆ (Communications Decency Act) ಸೆಕ್ಷನ್ 230 ರ ಅಡಿ ಬೌದ್ಧಿಕ ಆಸ್ತಿ ಹಕ್ಕುಗಳ ಅಡಿ ಬರುತ್ತದೆ ಎಂದು ಅಮೆರಿಕದ ಸರ್ಕ್ಯೂಟ್ ಕೋರ್ಟ್ನ ನ್ಯಾಯಾಧೀಶ ಥಾಮಸ್ ಹಾರಡಿಮನ್ ಹೇಳಿದರು. ಈ ಕಾಯಿದೆಯು ಅಂತರ್ಜಾಲ ಪೂರೈಕೆದಾರರನ್ನು ಮೂರನೇ ವ್ಯಕ್ತಿಯ ವಿಷಯದ ಹೊಣೆಗಾರಿಕೆಯಿಂದ ರಕ್ಷಿಸುತ್ತದೆ.
ಸದ್ಯ ಈ ಪ್ರಕರಣವು ಸ್ಯಾನ್ ಫ್ರಾನ್ಸಿಸ್ಕೋದ ಒಂಬತ್ತನೇ ಯುಎಸ್ ಸರ್ಕ್ಯೂಟ್ನಿಂದ ಅಮೆರಿಕ ಸುಪ್ರೀಂಕೋರ್ಟ್ಗೆ ವರ್ಗವಾಗುವ ಸಾಧ್ಯತೆಯಿದೆ. ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್ ಮತ್ತು ಇತರ ಕೆಲ ಸಂಘಟನೆಗಳು ಫೇಸ್‌ಬುಕ್ ಬೆಂಬಲಿಸಿ ಅಮಿಕಸ್ ಬ್ರೀಫ್ (Amicus brief- ಪ್ರಕರಣಕ್ಕೆ ಸಂಬಂಧ ಪಡೆದೆ ಇರುವವರು ನ್ಯಾಯಾಲಯಕ್ಕೆ ಸಲ್ಲಿಸುವ ಸಾಕ್ಷ್ಯಗಳು) ಸಲ್ಲಿಸಿವೆ. ಹೆಪ್ಗೆ ಬೆಂಬಲವಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಒಂದು ಸಾಕ್ಷ್ಯವನ್ನು ಸಲ್ಲಿಸಿದೆ.