ವಾಷಿಂಗ್ಟನ್: 27 ರಾಷ್ಟ್ರಗಳ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಒಕ್ಕೂಟ ಪ್ರಾರಂಭಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಘೋಷಿಸಿದೆ. ಇದು ಪ್ರಪಂಚದಾದ್ಯಂತ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ.
"ಇದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹಾಗೂ ಅದನ್ನು ರಕ್ಷಿಸುವ ಸಮಾನ ಮನಸ್ಕರ ಒಕ್ಕೂಟವಾಗಿರಲಿದೆ" ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಒಕ್ಕೂಟದ ಬಗ್ಗೆ ಮಾಹಿತಿ ನೀಡಿದರು.
ಈ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಪ್ರಮುಖ ದೇಶಗಳಲ್ಲಿ ಆಸ್ಟ್ರೇಲಿಯ, ಬ್ರೆಜಿಲ್, ಯುನೈಟೆಡ್ ಕಿಂಗ್ಡಮ್, ಇಸ್ರೇಲ್, ಉಕ್ರೇನ್, ನೆದರ್‌ಲ್ಯಾಂಡ್ ಮತ್ತು ಗ್ರೀಸ್ ದೇಶಗಳು ಇವೆ.