ವಾಷಿಂಗ್ಟನ್ ಡಿಸಿ (ಯುಎಸ್ಎ):ಆಸ್ಪತ್ರೆಗಳಲ್ಲಿ ದಾಖಲಾಗದ ಸೌಮ್ಯ ಹಾಗೂ ಮಧ್ಯಮ ರೋಗಲಕ್ಷಣ ಹೊಂದಿರುವ ರೋಗಿಗಳಿಗೆ ಅಮೆರಿಕಾದ ಔಷಧೀಯ ಕಂಪನಿ ಎಲಿ ಲಿಲ್ಲಿಯ ಪ್ರಾಯೋಗಿಕ ಕೋವಿಡ್-19 ಪ್ರತಿಕಾಯ 'ಬಮ್ಲಾನಿವಿಮಾಬ್'ವನ್ನು ಚಿಕಿತ್ಸೆಗೆ ಬಳಸಲು ಅನುಮೋದನೆ ಸಿಕ್ಕಿದೆ.
ಇದರ ತುರ್ತು ಬಳಕೆಯ ಅಧಿಕಾರವನ್ನು (ಇಡಿಎ) ಯುಎಸ್ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅನುಮೋದಿಸಿದೆ.
"ಬಾಮ್ಲನಿವಿಮಾಬ್‌ನ ಬಳಕೆಯ ತುರ್ತು ಅಧಿಕಾರವು ಆರೋಗ್ಯ ವೃತ್ತಿಪರರು ಮತ್ತು ಕೋವಿಡ್-19 ರೋಗಿಗಳಿಗೆ ಮತ್ತೊಂದು ಸಂಭಾವ್ಯ ಸಾಧನವನ್ನು ಒದಗಿಸುತ್ತದೆ" ಎಂದು ಎಫ್‌ಡಿಎಯ ಔಷಧ ಮೌಲ್ಯಮಾಪನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಕಾರಿ ನಿರ್ದೇಶಕ ಪ್ಯಾಟ್ರಿಜಿಯಾ ಕವಾಝೋನಿ ಹೇಳಿದರು.