ವಾಷಿಂಗ್ಟನ್: ಚೀನಾದ ಜನಪ್ರಿಯ ಆ್ಯಪ್‌ಗಳಾದ ಟಿಕ್‌ಟಾಕ್ ಮತ್ತು ವೀಚಾಟ್ ಅನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಟಿಕ್ ಟಾಕ್- ವೀಚಾಟ್ ಆ್ಯಪ್ ನಿಷೇಧಿಸುವ ಆದೇಶಕ್ಕೆ ಸಹಿ ಹಾಕಿದ ಟ್ರಂಪ್ - ಟಿಕ್ ಟಾಕ್ ಹಾಗೂ ವೆಚಾಟ್ ಅನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ ಟ್ರಂಪ್
ಭದ್ರತಾ ಬೆದರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಜನಪ್ರಿಯ ಆ್ಯಪ್‌ಗಳಾದ ಟಿಕ್‌ಟಾಕ್ ಮತ್ತು ವೀಚಾಟ್ ಅನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ.
trump
ಈ ಆ್ಯಪ್ಗಳು ರಾಷ್ಟ್ರೀಯ ಭದ್ರತೆಗೆ ಮತ್ತು ದೇಶದ ಆರ್ಥಿಕತೆಗೆ ಅಪಾಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ನಿಷೇಧವು 45 ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಟ್ರಂಪ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಟಿಕ್‌ಟಾಕ್ ಮತ್ತು ವೀಚಾಟ್ ನಿಷೇಧಿಸಿದ ಮೊದಲ ದೇಶ ಭಾರತ. ಭಾರತವು 106 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಕ್ರಮವನ್ನು ಟ್ರಂಪ್ ಆಡಳಿತ ಮತ್ತು ಅಮೆರಿಕದ ಶಾಸಕರು ಸ್ವಾಗತಿಸಿತ್ತು. ಇದೀಗ ಅಮೆರಿಕವು ಸಹ ಅಂತಹುದೇ ನಿರ್ಧಾರ ಕೈಗೊಂಡು ಚೀನಾಕ್ಕೆ ಪಾಠ ಕಲಿಸಲು ಮುಂದಾಗಿದೆ.