ವಾಷಿಂಗ್ಟನ್: ಅಮೆರಿಕದ ಕೊರೊನಾ ವೈರಸ್ ಪರೀಕ್ಷೆ ತುಂಬಾ ನಿಧಾನವಾಗಿದೆ ಎಂಬ ಟೀಕೆಗೆ ಉತ್ತರಿಸುವ ಉದ್ದೇಶದಿಂದ ಶ್ವೇತಭವನವು ಸೋಮವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರವನ್ನು ಪುನಶ್ಚೇತನಗೊಳಿಸುವತ್ತ ಗಮನ ಹರಿಸಲು ಪ್ರಯತ್ನಿಸಿದ್ದಾರೆ.
ಶ್ವೇತಭವನದ ಹೊಸ ಪರೀಕ್ಷಾ ಗುರಿಗಳು ಸಾಕಷ್ಟಿವೆ ಎಂಬ ಕುರಿತು ಸಾರ್ವಜನಿಕ ಆರೋಗ್ಯ ತಜ್ಞರಿಂದ ಇನ್ನೂ ಅನುಮಾನಗಳಿವೆ.
ಸೋಮವಾರದಂದು ಕಂಡು ಬಂದ ಬೆಳವಣಿಗೆಗಳು ಈಗಿರುವ ನಿರ್ಬಂಧಗಳನ್ನು ಸರಳಗೊಳಿಸುವ ಶ್ವೇತಭವನದ ಪ್ರಾರಂಭದ ಯೋಜನೆಗಳಲ್ಲಿ ನಿರ್ಣಾಯಕ ಅಂತರವನ್ನು ಸರಿಪಡಿಸಲು ಉದ್ದೇಶಿಸಿವೆ. ಅಂದರೆ ಏಕಾಏಕಿ ಉಂಟಾದ ಆರ್ಥಿಕ ಕುಸಿತದಿಂದ ಚೇತರಿಕೆಯತ್ತ ಅಧ್ಯಕ್ಷರ ಗಮನವನ್ನು ಬದಲಾಯಿಸುವಾಗ ವೈರಸ್ ಪರೀಕ್ಷೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಕಳೆದ ಎರಡು ತಿಂಗಳುಗಳಲ್ಲಿ ಪರೀಕ್ಷಾ ಸಾಮರ್ಥ್ಯ ಮತ್ತು ಲಭ್ಯತೆಯ ಕೊರತೆಯಿದೆ ಎಂದು ಸಾರ್ವಜನಿಕ ಹೇಳಿಕೆಗಳ ಹೊರತಾಗಿಯೂ ಮುಂಬರುವ ವಾರದಲ್ಲಿ ರಾಜ್ಯಗಳು ತಮ್ಮ ಪರೀಕ್ಷೆಯನ್ನು ಹೆಚ್ಚಿಸಲು ಆಡಳಿತವು ನೀಲನಕ್ಷೆಯನ್ನು ಅನಾವರಣಗೊಳಿಸಿತು.
ಪ್ರತಿ ತಿಂಗಳು ಜನಸಂಖ್ಯೆಯ 2.6 ರಷ್ಟು ಕೋವಿಡ್ 19 ಸೋಂಕಿತರ ಪರೀಕ್ಷೆಯನ್ನು ರಾಜ್ಯಗಳು ಪೂರೈಸುವ ಗುರಿಯನ್ನು ಹೊಸ ಪರೀಕ್ಷಾ ಮಾದರಿಗಳು ಹೊಂದಿವೆ ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.