ಕರ್ನಾಟಕ

karnataka

ETV Bharat / international

ನಾನು ಖಂಡಿತವಾಗಿಯೂ ಶ್ವೇತ ಭವನ ತೊರೆಯುತ್ತೇನೆ: ಯುಎಸ್​ ನಿರ್ಗಮಿತ ಅಧ್ಯಕ್ಷ ಟ್ರಂಪ್ - ಶ್ವೇತ ಭವನವನ್ನು ತೊರೆಯಲಿರುವ ಟ್ರಂಪ್

ಈ ಹಿಂದೆ ಮತ ಎಣಿಕೆಯ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದ ನಿರ್ಗಮಿತ ಯುಎಸ್​ ಅಧ್ಯಕ್ಷ ಟ್ರಂಪ್, ಚುನಾವಣಾ ಆಯೋಗ ಔಪಚಾರಿಕವಾಗಿ ಹೇಳಿದರೆ ತಾವು ಶ್ವೇತ ಭವನ ತೊರೆಯುವುದಾಗಿ ತಿಳಿಸಿದ್ದಾರೆ.

ಯುಎಸ್​ ನಿರ್ಗಮಿತ ಅಧ್ಯಕ್ಷ ಟ್ರಂಪ್
ಯುಎಸ್​ ನಿರ್ಗಮಿತ ಅಧ್ಯಕ್ಷ ಟ್ರಂಪ್

By

Published : Nov 27, 2020, 1:29 PM IST

ವಾಷಿಂಗ್ಟನ್: ಈ ಹಿಂದೆ ಮತ ಎಣಿಕೆಯ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದ ನಿರ್ಗಮಿತ ಯುಎಸ್​ ಅಧ್ಯಕ್ಷ ಟ್ರಂಪ್​, ಚುನಾಯಿತ ಅಧ್ಯಕ್ಷ ಜೋ ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದರು. ಆದರೆ, ಇದೀಗ ಟ್ರಂಪ್​ ಶ್ವೇತ ಭವನ ತೊರೆಯುವ ಬಗ್ಗೆ ಮಾತನಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಜೋ ಬೈಡನ್​ ವಿಜಯ ದಾಖಲಿಸಿದ್ದಾರೆ ಎಂದು ಚುನಾವಣಾ ಆಯೋಗ ಔಪಚಾರಿಕವಾಗಿ ಹೇಳಿದರೆ, ತಾವು ಶ್ವೇತ ಭವನ ತೊರೆಯುವುದಾಗಿ ನಿರ್ಗಮಿತ ಯುಎಸ್​ ಅಧ್ಯಕ್ಷ ಟ್ರಂಪ್​ ತಿಳಿಸಿದ್ದಾರೆ.

ಶ್ವೇತ ಭವನ ತೊರೆಯುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಾನು ಖಂಡಿತವಾಗಿಯೂ ಶ್ವೇತ ಭವನ ತೊರೆಯುತ್ತೇನೆ. ಚುನಾವಣಾ ಆಯೋಗ ಔಪಚಾರಿಕವಾಗಿ ಜೋ ಬೈಡನ್​ ಗೆಲುವು ದಾಖಲಿಸಿದ್ದಾರೆ ಎಂದು ತಿಳಿಸಲಿ. ಆ ಬಳಿಕ ನಾನು ಖಂಡಿತವಾಗಿಯೂ ಶ್ವೇತ ಭವನ ತೊರೆಯುತ್ತೇನೆ ಎಂದರು.

ABOUT THE AUTHOR

...view details