ಕರ್ನಾಟಕ

karnataka

ETV Bharat / international

ದೋಷಾರೋಪಣೆ ಪಟ್ಟಿ ಸಿದ್ಧ.. ರಾಜೀನಾಮೆ ನೀಡಲು ಟ್ರಂಪ್ ಹಿಂದೇಟು! - 46 ನೇ ಅಧ್ಯಕ್ಷರಾಗಿ ಜೋ ಬೈಡನ್

ರಾಜೀನಾಮೆ ಎಂದರೆ ವೈಫಲ್ಯವನ್ನು ಒಪ್ಪಿಕೊಳ್ಳುವುದು ಆದ್ದರಿಂದ ಟ್ರಂಪ್​​​ ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ ಎಂದು ಶ್ವೇತಭವನದ ಹಿರಿಯ ಸಲಹೆಗಾರರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಅಮೆರಿಕದ ಸೆನೆಟ್​​ಗೆ ಅವರನ್ನು ಶಿಕ್ಷಿಸಲು ಸಾಕಷ್ಟು ಸಮಯವಿಲ್ಲ ಎಂದೂ ತಿಳಿಸಿದ್ದಾರೆ.

impeachment
ಟ್ರಂಪ್

By

Published : Jan 13, 2021, 4:23 PM IST

ವಾಷಿಂಗ್ಟನ್ (ಅಮೆರಿಕ) : ಕ್ಯಾಪಿಟಲ್​​​ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಟ್ರಂಪ್ ವಿರುದ್ಧ ಪ್ರತಿನಿಧಿ ಸಭೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ನಿರ್ಧರಿಸಿದೆ. ಆದರೂ, ಡೊನಾಲ್ಡ್ ಟ್ರಂಪ್​​ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

ರಾಜೀನಾಮೆ ಎಂದರೆ ವೈಫಲ್ಯವನ್ನು ಒಪ್ಪಿಕೊಳ್ಳುವುದು. ಹಾಗಾಗಿ ಟ್ರಂಪ್​​​ ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ ಎಂದು ಶ್ವೇತಭವನದ ಹಿರಿಯ ಸಲಹೆಗಾರರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಅಮೆರಿಕದ ಸೆನೆಟ್​​ಗೆ ಅವರನ್ನು ಶಿಕ್ಷಿಸಲು ಸಾಕಷ್ಟು ಸಮಯವಿಲ್ಲ ಎಂದೂ ತಿಳಿಸಿದ್ದಾರೆ.

ಜನವರಿ 20 ರಂದು 46 ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಅದಕ್ಕೂ ಒಂದು ದಿನ ಮುಂಚಿತವಾಗಿ ಟ್ರಂಪ್ ಫ್ಲೊರಿಡಾದ ತಮ್ಮ ಗೆಸ್ಟ್​ಹೌಸ್​ಗೆ ಹೋಗುವ ನಿರೀಕ್ಷೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ :ಡೊನಾಲ್ಡ್ ಟ್ರಂಪ್ ಚಾನಲ್​ನಿಂದ ವಿಡಿಯೋ ತೆಗೆದ ಯೂಟ್ಯೂಬ್: ಒಂದು ವಾರ ಖಾತೆ ಅಮಾನತು

ಅಧ್ಯಕ್ಷೀಯ ಚುನಾವಣೆಯ ಟ್ರಂಪ್ ಸೋಲನ್ನು ಒಪ್ಪಿಕೊಳ್ಳದ ಬೆಂಬಲಿಗರು, ಕ್ಯಾಪಿಟಲ್​​​ ಕಟ್ಟಡಕ್ಕೆ ನುಗ್ಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಮಾಡಿದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿತ್ತು. ಅಲ್ಲದೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಿಂದಾಗಿ ಟ್ರಂಪ್ ಟ್ವಿಟ್ಟರ್ ಖಾತೆಯನ್ನೂ ರದ್ದುಗೊಳಿಸಲಾಗಿದೆ.

ABOUT THE AUTHOR

...view details