ಒಟ್ಟಾವಾ:ಒಂಟಾರಿಯೊ ಪ್ರಾಂತೀಯ ಪೊಲೀಸರು ಸ್ಥಳೀಯ ರೈಲು ದಿಗ್ಬಂಧನ ತಡೆಯಲು ಆರಂಭಿಸಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ 'ಶಾಂತಿಯುತ ನಿರ್ಣಯ'ದ ಕರೆ ನೀಡಿದ್ದಾರೆ.
ಮೂರು ವಾರಗಳ ಹಿಂದೆಯೇ ರೈಲ್ವೆ ಹಳಿಗಳ ಬಳಿ ಈ ದಿಗ್ಬಂಧನ ಹಾಕಲಾಗಿದೆ. ವೆಟ್ಸ್‌ಸುವೆಟ್ ಫಸ್ಟ್ ನೇಷನ್ ಭೂಮಿಯಲ್ಲಿ ಗ್ಯಾಸ್ಲಿಂಕ್ ಪೈಪ್ಲೈನ್ ಹಾಕುವ ಯೋಜನೆ ವಿರೋಧಿಸಿ ಇಲ್ಲಿ ದಿಗ್ಬಂಧನ ಹಾಕಲಾಗಿದೆ. ಇದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ.
ಶಾಂತಿಯುತ ವಾತಾವರಣಕ್ಕೆ ಕರೆಕೊಟ್ಟ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ! ಸೋಮವಾರದಂದು ದಿಗ್ಬಂಧನ ಸ್ಥಳದಲ್ಲಿದ್ದ ಹಲವಾರು ಜನರನ್ನು ಬಂಧಿಸಿ ಕೆಲ ಸಮಯದ ಬಳಿಕ, ನಮಗೆ ಶಾಂತಿಯುತ ನಿರ್ಣಯಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆಂದು ಪ್ರಧಾನಿ ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ.
ಫೆಬ್ರವರಿ 6ರಿಂದ ಜಾರಿಯಲ್ಲಿರುವ ದಿಗ್ಬಂಧನದಿಂದಾಗಿ ಪ್ರಮುಖ ರೈಲು ಕಾರಿಡಾರ್ ಮೂಲಕ ಸಾಗಿಸುವ ಸರಕು ಮತ್ತು ಪ್ರಯಾಣಿಕರ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ. ಪರಿಣಾಮ ಸುಮಾರು 1,500 ರೈಲು ಕಾರ್ಮಿಕರ ಕೆಲಸವನ್ನು ತಾತ್ಕಾಲಿಕವಾಗಿ ವಜಾಗೊಳಿಸಲಾಗಿದೆ. ನೂರಾರು ಪ್ರತಿಭಟನಾಕಾರರು ಒಟ್ಟಾವಾದಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಪ್ರತಿಭಟನೆ ತಡೆಯುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಕೆಲವರನ್ನು ಬಂಧಿಸಲಾಗಿದೆ.