ಸ್ಯಾನ್ ಜುವಾನ್ (ಪುಯೆರ್ಟೊರಿಕೊ): ಕೆರಿಬಿಯನ್ ಸಮುದ್ರ ತೀರದಲ್ಲಿರುವ ಪುಟ್ಟ ದೇಶ ಹೈಟಿಯಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಬಲ ಭೂಕಂಪಕ್ಕೆ ತುತ್ತಾದ ಲಕ್ಷಾಂತರ ಮಂದಿ ಇನ್ನೂ ನೆರವಿಗಾಗಿ ಕಾಯುತ್ತಿದ್ದಾರೆ. ಭೂಮಿ ಕಂಪಿಸಿ ಒಂದು ತಿಂಗಳಾದರೂ ಅದೆಷ್ಟೋ ಮಂದಿಗೆ ಇನ್ನೂ ಯಾವುದೇ ರೀತಿಯ ನೆರವು ತಲುಪಿಲ್ಲ.
ಆಗಸ್ಟ್ 14ರಂದು 7.2 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಭೂಕಂಪದ ಪರಿಣಾಮಗಳನ್ನು ಈ ಪುಟ್ಟ ರಾಷ್ಟ್ರ ಎದುರಿಸುತ್ತಲೇ ಬಂದಿದೆ. ಈಗಲೂ ಸಾವು - ನೋವಿನ ಪ್ರಮಾಣ ಮುಂದುವರೆಯುತ್ತಲೇ ಇದೆ. ಭೂಕಂಪದ ತೀವ್ರತೆಗೆ ತುತ್ತಾಗಿರುವ ಲಕ್ಷಾಂತರ ಮಂದಿ ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ಒಂದು ತಿಂಗಳಾದರೂ ಲಕ್ಷಾಂತರ ಮಂದಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ.