ಕೆರ್ಮನ್(ಇರಾನ್):ಮೇಜರ್ ಜನರಲ್ ಕಾಸಿಮ್ ಸುಲೇಮಾನಿ ಅಂತ್ಯಕ್ರಿಯೆ ಸಂದರ್ಭ ಜನಸಂದಣಿಯಿಂದಾಗಿ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕಾಸಿಮ್ ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಕಾಲ್ತುಳಿತ: 35 ಜನ ಸಾವು!
ಇರಾಕ್ ಹಾಗೂ ಇರಾನ್ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಉಪ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಕಾಸಿಮ್ ಸುಲೇಮಾನಿ ಅಂತ್ಯಕ್ರಿಯೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕಾಸಿಮ್ ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಕಾಲ್ತುಳಿತ
ಕಾಸಿಮ್ ಸುಲೇಮಾನಿ ಹುಟ್ಟೂರು ಆಗಿರುವ ಕೆರ್ಮನ್ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯುತ್ತಿತ್ತು. ರಸ್ತೆಯುದ್ದಕ್ಕೂ ಲಕ್ಷಾಂತರ ಜನರು ಸುಲೇಮಾನಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ನಡೆದ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಗ್ದಾದ್ ಏರ್ಪೋರ್ಟ್ನಲ್ಲಿ ಅಮೆರಿಕದ ಪಡೆಗಳು ನಡಸಿದ ವೈಮಾನಿಕ ದಾಳಿಯಲ್ಲಿ ಇರಾಕ್ ಹಾಗೂ ಇರಾನ್ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್ ಜನರಲ್ ಕಾಸಿಮ್ ಸುಲೇಮಾನಿ ಹತ್ಯೆಯಾಗಿದ್ದಾರೆ.