ಕೇಪ್ ಕೆನವೆರಲ್ (ಯು.ಎಸ್):ನಾಸಾದ ಇಬ್ಬರು ಗಗನಯಾತ್ರಿಗಳು ಸ್ಪ್ಲಾಶ್‌ಡೌನ್‌ನಲ್ಲಿ ಭಾನುವಾರ ಭೂಮಿಗೆ ಮರಳಿದ್ದಾರೆ. ಅವರು ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಪರೀಕ್ಷಾ ಹಾರಾಟವನ್ನು ಮುಗಿಸಿದ ಅವರು ಕ್ಯಾಪ್ಸುಲ್ ಗಲ್ಫ್ ಆಫ್ ಮೆಕ್ಸಿಕೊಕ್ಕೆ ಪ್ಯಾರಚೂಟ್ ಮೂಲಕ ಮರಳಿದರು.
45 ವರ್ಷಗಳಲ್ಲಿ ಯುಎಸ್ ಗಗನಯಾತ್ರಿಗಳು ಮಾಡಿದ ಮೊದಲ ಸ್ಪ್ಲಾಶ್‌ಡೌನ್ ಇದಾಗಿದ್ದು, ಜನರನ್ನು ಕಕ್ಷೆಗೆ ಕೊಂಡೊಯ್ಯಲು ವಾಣಿಜ್ಯಿಕವಾಗಿ ನಿರ್ಮಿಸಿದ ಮತ್ತು ಕಾರ್ಯನಿರ್ವಹಿಸುವ ಮೊದಲ ಬಾಹ್ಯಾಕಾಶ ನೌಕೆ ಇದಾಗಿದೆ.
ಮುಂದಿನ ತಿಂಗಳ ಆರಂಭದಲ್ಲಿ ಮತ್ತೊಂದು ಸ್ಪೇಸ್ ಎಕ್ಸ್ ಉಡಾವಣೆಯಾಗಲಿದ್ದು, ಮುಂದಿನ ವರ್ಷ ಪ್ರವಾಸಿ ವಿಮಾನಗಳು ಕಾರ್ಯನಿರ್ವಹಿಸಲಿವೆ. ಟೆಸ್ಟ್ ಪೈಲಟ್‌ಗಳಾದ ಡೌಗ್ ಹರ್ಲಿ ಮತ್ತು ಬಾಬ್ ಬೆಹ್ನ್ಕೆನ್ ಅವರು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿ ಎರಡು ಎರಡು ತಿಂಗಳ ನಂತರ ಭೂಮಿಗೆ ಮರಳಿದರು.
ಏನಿದು ಸ್ಪ್ಲಾಶ್‌ಡೌನ್: ಸಾಗರ ಮೇಲೆ ಮಾನವಸಹಿತ ಬಾಹ್ಯಾಕಾಶ ನೌಕೆಯ ಇಳಿಯುವಿಕೆಯನ್ನ ಸ್ಪ್ಲಾಶ್‌ಡೌನ್ ಎನ್ನಲಾಗುತ್ತದೆ. ಧುಮುಕು ಕೊಡೆಗಳ ಸಹಾಯದಿಂದ ಬಾಹ್ಯಾಕಾಶದಿಂದ ಸಮುದ್ರದೆಡೆಗೆ ಬಾಹ್ಯಾಕಾಶ ನೌಕೆಯ ಇಳಿಯುವಿಕೆಯನ್ನ ಹೀಗೆ ಕರೆಯಲಾಗುತ್ತದೆ.