ವಾಷಿಂಗ್ಟನ್:ಅಮೆರಿಕ ಮೂಲದ 'ಫಾರ್ಮಾಸ್ಯುಟಿಕಲ್ ಜಿಯಾಂಟ್ ಫಿಜರ್' ಅಮೆರಿಕದ ಆರೋಗ್ಯವಂತ ಯುವಜನರಲ್ಲಿ ಪ್ರಾಯೋಗಿಕ ಲಸಿಕೆಯ ಅನೇಕ ಆವೃತ್ತಿಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ.
ವಿಶ್ವಾದ್ಯಂತ 2.5 ಲಕ್ಷಕ್ಕೂ ಹೆಚ್ಚು ಜನರಲ್ಲಿ ಇರುವ ಉಸಿರಾಟದ ಕಾಯಿಲೆಯ ವಿರುದ್ಧ ಸಂಭಾವ್ಯ ರಕ್ಷಣೆ ನೀಡುವ ಔಷಧ ಅನ್ವೇಷಿಸಲು ಫಿಜರ್, ಜರ್ಮನಿಯ ಬಯೋಟೆಕ್ ಎಸ್ಇ ಜೊತೆ ಪಾಲುದಾರಿಕೆ ಹೊಂದಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಮ್ಯಾನ್‌ಹಟನ್‌ನ ನ್ಯೂಯಾರ್ಕ್ ಯೂನಿವರ್ಸಿಟಿ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಬಾಲ್ಟಿಮೋರ್‌ನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಮಂಗಳವಾರ ಫಿಜರ್ ಮತ್ತು ಜರ್ಮನಿಯ ಬಯೋಟೆಕ್, ಈಗಾಗಲೇ ಕೆಲವರಿಗೆ ಚುಚ್ಚುಮದ್ದು ನೀಡಲು ಪ್ರಾರಂಭಿಸಲಾಗಿದೆ ಎಂದು ತಿಳಿದ್ದಾರೆ.
ಲಸಿಕೆ ಹಾಕಿಸಿಕೊಂಡವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿರುವ ಸಂಶೋಧಕರು, ಈ ಪ್ರಯೋಗದಿಂದ ರೋಗ ತಡೆಗಟ್ಟುವ ಹಾಗೂ ಲಸಿಕೆಯ ಮೌಲ್ಯಮಾಪನ ಮಾಡಲು ನಮಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ಇದು ಕರೋನವೈರಸ್ ಅನ್ನು ತಡೆಗಟ್ಟುವಂತಹ ಪ್ರಬಲವಾದ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತಿದೆ ಎಂಬುದನ್ನ ಅರಿಯಲು ಮತ್ತು ಲಸಿಕೆಯ ಪ್ರಮಾಣ( ಡೋಸ್) ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನ ಅರಿಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಈಗಾಗಲೇ 360 ಜನರ ಮೇಲೆ ಅಧ್ಯಯನವನ್ನು ನಡೆಸಲಾಗುತ್ತಿದ್ದು, ಇದರ ಫಲಿತಾಂಶ ಮುಂದಿನ ತಿಂಗಳಲ್ಲಿ ಬರುವ ಸಾಧ್ಯತೆಯಿದೆ ಎಂದು ಫಿಜರ್‌ನ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥ ಕ್ಯಾಥರಿನ್ ಜಾನ್ಸೆನ್ ಹೇಳಿದ್ದಾರೆ.
ಪ್ರಸ್ತುತ 18- 55 ವರ್ಷದವರ ಮೇಲೆ ಈ ಲಸಿಕೆಯನ್ನ ಪ್ರಯೋಗ ಮಾಡಲಾಗಿದೆ. ಇದರ ಫಲಿತಾಂಶವನ್ನ ನೋಡಿಕೊಂಡು 85 ವರ್ಷದವರ ಮೇಲೂ ಪ್ರಯೋಗ ಮಾಡಲಾಗುವುದು ಎಂದು ಸಂಶೋಧಕರು ತಿಳಿಸಿದ್ದಾರೆ.