ವಾಷಿಂಗ್ಟನ್:ಅಮೆರಿಕದಾದ್ಯಂತ ಪ್ರತಿಭಟನೆಗಳನ್ನು ಹತ್ತಿಕ್ಕಲು ಸೈನ್ಯವನ್ನು ಬಳಸುವ ಯೋಜನೆಯನ್ನು ಪೆಂಟಗನ್ ಮುಖ್ಯಸ್ಥರು ವಿರೊಧಿಸಿದ್ದಾರೆ. ಟ್ರಂಪ್ ಪ್ರತಿಭಟನೆ ಹತ್ತಿಕ್ಕಲು ಸೈನ್ಯ ಬಳಸುವ ಕುರಿತು ಯೋಚಿಸಿದ್ದರು.
ಪ್ರತಿಭಟನೆ ಹತ್ತಿಕ್ಕಲು ಸೇನೆ ಬಳಕೆ: ಟ್ರಂಪ್ ನಿರ್ಧಾರ ಖಂಡಿಸಿದ ರಕ್ಷಣಾ ಕಾರ್ಯದರ್ಶಿ
ಜಾರ್ಜ್ ಫ್ಲಾಯ್ಡ್ ನಿಧನದ ಬಳಿಕ ಯುನೈಟೆಡ್ ಸ್ಟೇಟ್ಸ್ನಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಹತೋಟಿಗೆ ತರಲು ಸೈನ್ಯ ಬಳಸುವ ಡೊನಾಲ್ಡ್ ಟ್ರಂಪ್ ಬೆದೆರಿಕೆಯನ್ನು ಅವರ ರಕ್ಷಣಾ ಕಾರ್ಯದರ್ಶಿ ಖಂಡಿಸಿದ್ದಾರೆ.
trump
ಡೊನಾಲ್ಡ್ ಟ್ರಂಪ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹಾಗೂ ಜಿಮ್ ಮ್ಯಾಟಿಸ್ ಅವರು ಟ್ರಂಪ್ ನಿರ್ಧಾರಕ್ಕೆ ಸಾರ್ವಜನಿಕವಾಗಿಯೇ ಟೀಕೆ ವ್ಯಕ್ತಪಡಿಸಿದ್ದಾರೆ.
ಜಾರ್ಜ್ ಫ್ಲಾಯ್ಡ್ ನಿಧನದ ಬಳಿಕ ಅಮೆರಿಕಾದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಯನ್ನು ಹತೋಟಿಗೆ ತರಲು ಮಿಲಿಟರಿಯನ್ನು ಬಳಸಬೇಕೆಂಬ ಟ್ರಂಪ್ ಬೆದರಿಕೆಗಳನ್ನು ಮ್ಯಾಟಿಸ್ ಖಂಡಿಸಿದರು. ಕಾನೂನು ಜಾರಿಗಾಗಿ ಮಿಲಿಟರಿ ಪಡೆಗಳನ್ನು ಬಳಸುವುದನ್ನು ಎಸ್ಪರ್ ವಿರೋಧಿಸಿದ್ದಾರೆ.