ವಾಷಿಂಗ್ಟನ್ :ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಪ್ರಯತ್ನದಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭವಿಷ್ಯದ ಕಾರ್ಯಾಚರಣೆಗಳ ನೈಜ ಜೀವನದ ಸವಾಲುಗಳನ್ನು ಎದುರಿಸಲು ಈಗಲೇ ಗಗನಯಾತ್ರಿಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಭೂಮಿಯ ಮೇಲೆಯೇ ಮಂಗಳ ಗೃಹದಂತಹ ಆವಾಸ ಸ್ಥಾನವೊಂದನ್ನು ಸ್ಥಾಪಿಸಿದೆ.
ಒಂದು ವರ್ಷದವರೆಗೆ ಕೃತಕ ಮಂಗಳ ಗೃಹದಲ್ಲಿ ವಾಸಿಸಲು ಇಲ್ಲಿದೆ ಸುವರ್ಣಾವಕಾಶ - Mars Dune Alpha
ಮಂಗಳ ಗೃಹದಲ್ಲಿ ಬದುಕುವ ಮನುಷ್ಯರ ಮೇಲೆ ಅಲ್ಲಿನ ವಾತಾವರಣ ಹೇಗೆ ಪರಿಣಾಮ ಬೀರುತ್ತದೆ? ಇದಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾಸಾ ಅಧ್ಯಯನ ಮಾಡುತ್ತದೆ..
ಕೃತಕ ಮಂಗಳ ಗೃಹ
ಹೂಸ್ಟನ್‌ನ ಜಾನ್ಸನ್ ಸ್ಪೇಸ್ ಸೆಂಟರ್‌ನಲ್ಲಿ 3ಡಿ-ಪ್ರಿಂಟರ್‌ನಿಂದ ರಚಿಸಲಾದ 1,700 ಚದರ ಅಡಿ ವಿಸ್ತೀರ್ಣದಲ್ಲಿ 'ಮಾರ್ಸ್ ಡ್ಯೂನ್ ಆಲ್ಫಾ' ಹೆಸರಿನ ಕೃತಕ ಮಂಗಳ ಗೃಹದಲ್ಲಿ ವರ್ಷವಿಡೀ ವಾಸಿಸ ಬಯಸುವ ವಿಶ್ವದ ಖಗೋಳ ಪ್ರಿಯರಿಗೆ ನಾಸಾ ಒಂದು ಅವಕಾಶ ಕಲ್ಪಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆದರೆ, ನಾಲ್ಕು ಜನರನ್ನು ಮಾತ್ರ ಇದಕ್ಕೆ ಆಯ್ಕೆ ಮಾಡಲಾಗುವುದು.
ಮಂಗಳ ಗೃಹದಲ್ಲಿ ಬದುಕುವ ಮನುಷ್ಯರ ಮೇಲೆ ಅಲ್ಲಿನ ವಾತಾವರಣ ಹೇಗೆ ಪರಿಣಾಮ ಬೀರುತ್ತದೆ? ಇದಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾಸಾ ಅಧ್ಯಯನ ಮಾಡುತ್ತದೆ.