ಹೈದರಾಬಾದ್:ಕೊರೊನಾ ಸೋಂಕಿನ ಕಾರಣಕ್ಕೆ ವಿಶ್ವದಾದ್ಯಂತ ಸುಮಾರು 12 ಮಿಲಿಯನ್ ಮಹಿಳೆಯರು ಗರ್ಭನಿರೋಧಕ ಸೇವೆಗಳು ಸಿಗದೇ ತೊಂದರೆಗೆ ಒಳಗಾಗಿದ್ದಾರೆ ಎಂಬ ವಿಚಾರ ವಿಶ್ವಸಂಸ್ಥೆಯ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಂಸ್ಥೆ (ಯುಎನ್ಎಫ್ಪಿಎ) ಮತ್ತು ಅವೇನಿರ್ ಹೆಲ್ತ್ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗವಾಗಿದೆ.
ಕೊರೊನಾ ಹಾವಳಿ ಆರಂಭವಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವರದಿಯನ್ನು ಮಾರ್ಚ್ 11ರಂದು ಬಿಡುಗಡೆ ಮಾಡಲಾಗಿದ್ದು, ಸುಮಾರು 1.4 ಮಿಲಿಯನ್ ಮಹಿಳೆಯರು ಉದ್ದೇಶ ಅನಪೇಕ್ಷಿತ ಗರ್ಭಧಾರಣೆಗೆ ಒಳಗಾಗಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ವಿಶ್ವದಾದ್ಯಂತ ಕೊರೊನಾ ಸಮಯದಲ್ಲಿನ ಗರ್ಭದಾರಣೆಯ ಪ್ರಮಾಣ ಹೆಚ್ಚಾಗುತ್ತಿದ್ದರೆ, ಈಗ ಆರೋಗ್ಯ ಸೇವೆಗಳು, ಅತ್ಯಂತ ಮುಖ್ಯವಾಗಿ ಗರ್ಭ ನಿರೋಧಕ ಸೇವೆಗಳು ಜಾರಿಯಲ್ಲಿರುವ ಕಾರಣದಿಂದ ಹೆಚ್ಚು ಆದಾಯದ ರಾಷ್ಟ್ರಗಳಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದೆ.
ಇದನ್ನೂ ಓದಿ:ಮನೋಜ್ ಬಾಜಪೇಯಿಗೆ ಕೊರೊನಾ ಸೋಂಕು; ಹೋಂ ಕ್ವಾರಂಟೈನಲ್ಲಿದ್ದಾರೆ ನಟ
ಸುಮಾರು 115 ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗರ್ಭನಿರೋಧಕ ಸೇವೆಗಳಿಗೆ ಅಡಚಣೆಯುಂಟಾಗಿದೆ ಎಂದು ವಿಶ್ವಸಂಸ್ಥೆಯ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಂಸ್ಥೆ ಹೇಳಿದೆ.
2020ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಟುಂಬ ಯೋಜನೆ (ಫ್ಯಾಮಿಲಿ ಪ್ಲಾನಿಂಗ್)ಗೆ ಹಿನ್ನಡೆಯುಂಟಾಗಿದೆ. ಸಾಕಷ್ಟು ಮಂದಿ ಕೊರೊನಾ ಭೀತಿಯಿಂದ ಮತ್ತು ಆರೋಗ್ಯ ಸೇವೆಗಳ ಕೊರತೆಯಿಂದ ಮಧ್ಯಮ ಮತ್ತು ಕಡಿಮೆ ಆದಾಯದ ಮಿಲಿಯನ್ಗಟ್ಟಲೆ ಮಂದಿ ಮಹಿಳೆಯರು ಗರ್ಭ ಧರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೊರೊನಾ ವೇಳೆಯಲ್ಲಿ ಗರ್ಭನಿರೋಧಕಗಳನ್ನು ಒದಗಿಸಲು ನಾವು ಸಿದ್ಧವಿದ್ದೆವು. ಇದರ ಜೊತೆಗೆ ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ರಕ್ಷಣಾ ಸಾಮಗ್ರಿಗಳನ್ನು ನೀಡುವ ಸಾಮರ್ಥ್ಯವಿತ್ತು ಎಂದು ವಿಶ್ವಸಂಸ್ಥೆಯ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಿಕೊಂಡಿದೆ.