ನ್ಯೂಯಾರ್ಕ್:ಭಾರತದ ವಿರುದ್ಧ ದ್ವೇಷ ಭಾಷಣ ಮಾಡಲು ಶಾಂತಿ-ಸಂಸ್ಕೃತಿ ಕುರಿತ ವಿಶ್ವಸಂಸ್ಥೆಯ ಉನ್ನತ ಮಟ್ಟದ ವೇದಿಕೆಯನ್ನು ಬಳಸಿಕೊಂಡಿದ್ದಕ್ಕಾಗಿ ಪಾಕಿಸ್ತಾನ ನಿಯೋಗವನ್ನು ದೂಷಿಸಿದ ಭಾರತ, ಅವರು ತಮ್ಮದೇ ಆದ ವ್ಯವಸ್ಥೆಯ ಸ್ವಯಂ ಮೌಲ್ಯಮಾಪನ ಮತ್ತು ಅಲ್ಪಸಂಖ್ಯಾತರನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದೆ.
74ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತೀಯ ಸಲಹೆಗಾರ್ತಿ ಪೌಲೋಮಿ ತ್ರಿಪಾಠಿ, ಭಾರತದ ವಿರುದ್ಧ ಅಸಂಬದ್ಧ ಆರೋಪಗಳನ್ನು ಮಾಡುವ ಮೊದಲು ಎಲ್ಲಾ ಧರ್ಮಗಳ ಜನರ ಸಮಾನ ಹಕ್ಕುಗಳನ್ನು ಸಮಾನವಾಗಿ ನೋಡುವುದನ್ನು ಕಲಿಯಲಿ. ತಮ್ಮ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವತ್ತ ಹೆಜ್ಜೆ ಹಾಕಲಿ ಎಂದು ಅವರು ಹೇಳಿದರು.
ಪಾಕಿಸ್ತಾನ ನಿಯೋಗ ಭಾರತದ ವಿರುದ್ಧ ದ್ವೇಷ ಭಾಷಣಕ್ಕಾಗಿ ವಿಶ್ವಸಂಸ್ಥೆ ವೇದಿಕೆಯನ್ನು ಮತ್ತೊಮ್ಮೆ ಬಳಸಿಕೊಂಡಿದೆ. ಹೀಗಾಗಿ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು. ದೇಶದಲ್ಲಿ ಮತ್ತು ಅದರ ಗಡಿಯುದ್ದಕ್ಕೂ ಹಿಂಸಾಚಾರದ ಸಂಸ್ಕೃತಿಯನ್ನು ಹುಟ್ಟುಹಾಕುವ ಸಂದರ್ಭದಲ್ಲಿ ಪಾಕಿಸ್ತಾನ ಈ ರೀತಿ ವರ್ತಿಸುತ್ತದೆ ಎಂದು ಕಿಡಿಕಾರಿದರು.
ಪಾಕಿಸ್ತಾನದ ಶೋಚನೀಯ ಮಾನವ ಹಕ್ಕುಗಳ ದಾಖಲೆಗಳು ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ತಾರತಮ್ಯದ ವರ್ತನೆಗೆ ಕಾರಣವಾಗಿವೆ. ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಸಿಖ್ಖರ ವಿರುದ್ಧ ಧರ್ಮ ನಿಂದನೆ ಕಾನೂನುಗಳನ್ನು ಅವರ ಮಾನವ ಹಕ್ಕುಗಳು ಮತ್ತು ಘನತೆಯನ್ನು ಉಲ್ಲಂಘಿಸಲು ಬಳಸಲಾಗುತ್ತದೆ. ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರ, ಬಲವಂತದ ಮತಾಂತರ ಮತ್ತು ಉಲ್ಲಂಘಿಸುವವರನ್ನು ಮದುವೆ ಆಗುವುದರಿಂದ ವಿಶೇಷವಾಗಿ ಅವರನ್ನು ದುರ್ಬಲರಾಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.