ಕರ್ನಾಟಕ

karnataka

ETV Bharat / international

ಅತಿಯಾಗಿ ಬೆವರುತ್ತೇನೆಂದು ಸರ್ಜರಿ ಮಾಡಿಸಿಕೊಂಡಿದ್ದ ತಾರೆ ಸಾವು

ಅತೀಯಾಗಿ ಬೆವರುತ್ತೇನೆಂದು ಸರ್ಜರಿ ಮಾಡಿಸಿಕೊಂಡಿದ್ದ ಖ್ಯಾತ ಬಾಡಿ ಬಿಲ್ಡರ್​ ತಾರೆ ಏಳು ದಿನಗಳ ನಂತರ ಸಾವಿಗೀಡಾಗಿದ್ದಾರೆ.

ಅತಿಯಾಗಿ ಬೆವರುತ್ತೇನೆಂದು ಸರ್ಜರಿ
ಅತಿಯಾಗಿ ಬೆವರುತ್ತೇನೆಂದು ಸರ್ಜರಿ

By

Published : Jul 15, 2021, 11:27 PM IST

ಮೆಕ್ಸಿಕೋ: ಬಾಡಿಬಿಲ್ಡರ್, ಇನ್‌ಸ್ಟಾಗ್ರಾಂ ತಾರೆ ಒಡಾಲಿಸ್ ಸ್ಯಾಂಟೊಸ್ ಮೆನಾ ಬೆವರುವಿಕೆಯನ್ನು ಸರಿಪಡಿಸಲು ಹೋಗಿ ಸಾವನ್ನಪ್ಪಿದ್ದಾರೆ. 23 ವರ್ಷದ ಒಡಾಲಿಸ್ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಬಾಡಿ ಬಿಲ್ಡರ್ ಆಗಿರುವ ಒಡಾಲಿಸಾ ಬಾಡಿ ಬಿಲ್ಡಿಂಗ್ ಟಿಪ್ಸ್ ನೀಡುತ್ತಿದ್ದರು.

ಅತಿಯಾಗಿ ಬೆವರುತ್ತೇನೆಂದು ಸರ್ಜರಿ

ಈಕೆಗೆ ಕಂಕುಳದಲ್ಲಿ ಅತೀಯಾದ ಬೆವರುವಿಕೆಯಾಗುತ್ತಿತ್ತಂತೆ. ಇದರಿಂದ ಹಲವು ಬಾರಿ ಮುಜುಗರಕ್ಕೂ ಒಳಗಾಗಿದ್ದರಂತೆ. ಈ ಬೆವರುವಿಕೆಯನ್ನು ಸರಿಪಡಿಸಲು ಸರ್ಜರಿ ಮಾಡಿಸಿದ್ದಾರೆ. ಸರ್ಜರಿ ಮಾಡಿಸಿಕೊಂಡ ಏಳು ದಿನಕ್ಕೆ ಒಡಾಲಿಸ್ ಸಾವಿಗೀಡಾಗಿದ್ದಾರೆ.

ಅತಿಯಾಗಿ ಬೆವರುತ್ತೇನೆಂದು ಸರ್ಜರಿ ಮಾಡಿಸಿಕೊಂಡಿದ್ದ ತಾರೆ ಸಾವು

ಮಿರಾಡ್ರೈ ಎಂಬ ಕಂಕುಳ ಬೆವರುವಿಕೆಯನ್ನು ಕಡಿಮೆ ಮಾಡುವ ಚಿಕಿತ್ಸೆಯನ್ನು ಮೆಕ್ಸಿಕೋದ ಗ್ವಾಡಲಜರಾದ ಸ್ಕಿನ್‌ಪೀಲ್ ಕ್ಲೀನಿಕ್ ಮಾಡುತ್ತಿದೆ. ಈ ಚಿಕಿತ್ಸೆಗೆ ಒಡಾಸಿಲ್ ಅವರ ಅನುಮತಿ ಮೇರೆಗೆ ಸೇರಿಸಲಾಗಿತ್ತು. ಈ ಸರ್ಜರಿಯಲ್ಲಿ ಶಾಖ ಶಕ್ತಿಯನ್ನು ಬಳಸಿಕೊಂಡು ಕಂಕುಳ ಕೆಳಗಿನ ಬೆವರು ಗ್ರಂಥಿಯನ್ನು ತೆಗೆದು ಹಾಕಲಾಗುತ್ತದೆ.

ABOUT THE AUTHOR

...view details