ಕರ್ನಾಟಕ

karnataka

ETV Bharat / international

ರೋಬೋಕಾಲ್ ಹಗರಣ: 22 ವರ್ಷ ಜೈಲುಶಿಕ್ಷೆಗೆ ಗುರಿಯಾದ ಭಾರತೀಯ - ರೋಬೋಕಾಲ್

ಸಾಗರೋತ್ತರ ರೋಬೋಕಾಲ್ ಹಗರಣದ ಮೂಲಕ 10 ಮಿಲಿಯನ್ ಯುಎಸ್ ಡಾಲರ್ ವಂಚಿಸಿದ್ದ ಭಾರತೀಯ ಪ್ರಜೆ 40 ವರ್ಷದ ಶೆಹ್ಜಾದ್‌ಖಾನ್ ಪಠಾಣ್​ಗೆ 22 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಯುಎಸ್​ ನ್ಯಾಯಾಲಯ ಆದೇಶ ಹೊರಡಿಸಿದೆ.

Us
ಯುಎಸ್​ ನ್ಯಾಯಾಲಯ

By

Published : Sep 17, 2021, 7:30 AM IST

ವಾಷಿಂಗ್ಟನ್( ಅಮೆರಿಕ): ಸಾಗರೋತ್ತರ ರೋಬೋಕಾಲ್ ಹಗರಣದ ಮೂಲಕ 4,000 ಅಮೆರಿಕನ್ನರಿಗೆ 10 ಮಿಲಿಯನ್ ಯುಎಸ್ ಡಾಲರ್ ವಂಚಿಸಿದ್ದ ಭಾರತೀಯ ಪ್ರಜೆಗೆ 22 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಅಲ್ಲಿನ ನ್ಯಾಯಾಲಯ ಆದೇಶ ಹೊರಡಿಸಿದೆ.

40 ವರ್ಷದ ಶೆಹ್ಜಾದ್‌ಖಾನ್ ಪಠಾಣ್ ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ಅಹಮದಾಬಾದ್‌ನಲ್ಲಿ ಕಾಲ್ ಸೆಂಟರ್ ಅನ್ನು ತೆರೆದು ಅದರ ಮೂಲಕ ಅಮೆರಿಕದ ಜನರ ಸಂಪರ್ಕ ಸಾಧಿಸಿ ಸಾಲ ಸೌಲಭ್ಯ ಜೊತೆಗೆ ಹಣ ಠೇವಣಿ ಇಡುವ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ ವಂಚಿಸುತ್ತಿದ್ದ ಎಂದು ತಿಳಿದು ಬಂದಿದೆ.

ಪಠಾಣ್​ ಮತ್ತು ಆತನ ಸಹಚರರು ಅಮೆರಿಕದಲ್ಲಿರುವ ವ್ಯಕ್ತಿಗಳಿಗೆ ಕಾಲ್​ಸೆಂಟರ್​ ಮೂಲಕ ಸಂಪರ್ಕ ಸಾಧಿಸಿ ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯ ಮತ್ತು ಠೇವಣಿ ಇಡುವ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ನಂಬಿದ್ದ ಸಂತ್ರಸ್ತರು ಹಣವನ್ನು ಆನ್​ಲೈನ್​ ಮೂಲಕ ಅಥವಾ ಭೌತಿಕವಾಗಿ ಭೇಟಿ ನೀಡಿ ಹಣ ಕೊಡುತ್ತಿದ್ದರು. ಆದರೆ, ಆ ಬಳಿಕ ವಂಚನೆ ಎಸಗುತ್ತಿದ್ದರು ಎಂದು ತಿಳಿದು ಬಂದಿದೆ.

ಇನ್ನು ಈ ಮೋಸದ ಜಾಲಕ್ಕೆ ಸಿಲುಕಿದವರಲ್ಲಿ ಹೆಚ್ಚಿನವರು ವಯೋವೃದ್ಧರು ಮತ್ತು ಉದ್ಯಮಿಗಳು. ಈ ಸಂತ್ರಸ್ತರು ಮೋಸ ಹೋದ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details