ವಾಷಿಂಗ್ಟನ್: 'ವಿಸ್ತೃತ' ಜಿ- 7 ಶೃಂಗಸಭೆಯಲ್ಲಿ ಭಾರತದ ಉಪಸ್ಥಿತಿ ಅತ್ಯಂತ ಮಹತ್ವದ್ದಾಗಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.
ಜೂನ್ 2 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ದೂರವಾಣಿ ಸಂಭಾಷಣೆ ಕುರಿತು ಮಾತನಾಡಿದ ತಾರಂಜಿತ್ ಸಿಂಗ್, ಅಮೆರಿಕದಲ್ಲಿ ನಡೆಯಲಿರುವ ಜಿ -7 ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪಿಎಂ ಮೋದಿಗೆ ಟ್ರಂಪ್ ಆಹ್ವಾನ ನೀಡಿದ್ದಾರೆ. ಇದಕ್ಕೆ ಮೋದಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಭಯ ನಾಯಕರು ಹಾಗೂ ಎರಡು ದೇಶಗಳ ಹಿರಿಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಜಿ -7 ಸಭೆ ವಿಸ್ತರಿಸುವ ಟ್ರಂಪ್ರ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಕೆಲಸ ಮಾಡಲು ಸಂತೋಷವೆನಿಸುತ್ತದೆ ಎಂದರು.