ವಾಷಿಂಗ್ಟನ್:ಅಮೆರಿಕದ ಜನರ ಸಂಕಷ್ಟದ ಸಮಯದಲ್ಲಿ ಭಾರತ ಸಹಕಾರ ನೀಡಿದೆ. ಇದೀಗ ಭಾರತ ಅತ್ಯಂತ ಕೆಟ್ಟ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು,ಅಮೆರಿಕ ಸಕಲ ರೀತಿಯಲ್ಲೂ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ದೂರವಾಣಿ ಕರೆಯ ಬಳಿಕ ಭರವಸೆ ಕೊಟ್ಟರು.
ಶ್ವೇತಭವನವು ಘೋಷಿಸಿದ ತುರ್ತು ಸಹಾಯವಾದ ಆಮ್ಲಜನಕ ಸರಬರಾಜು, ಕೊರೊನಾ ಲಸಿಕೆಗಳ ತಯಾರಿಕೆಗೆ ಕಚ್ಚಾ ವಸ್ತುಗಳು ಪೂರೈಕೆ, ಪಿಪಿಯ ಕಿಟ್ಗಳು ಭಾರತಕ್ಕೆ ಏ.26ರಂದು ಆಗಮಿಸಿದೆ.
"ಭಾರತ ನಮಗಾಗಿ ಇತ್ತು. ಇದೀಗ ನಾವು ಅವರಿಗಾಗಿ ಇರುತ್ತೇವೆ. ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ತುರ್ತು ನೆರವು ಮತ್ತು ಸಂಪನ್ಮೂಲಗಳನ್ನು ಒದಗಿಸಲು ಅಮೆರಿಕ ಸಂಪೂರ್ಣ ಬೆಂಬಲ ನೀಡಲಿದೆ" ಎಂದು ಬೈಡೆನ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಕಚ್ಚಾ ವಸ್ತು ಪೂರೈಕೆಗೆ ಯುಎಸ್ ಒಪ್ಪಿಗೆ: ಬೈಡನ್ ಜೊತೆ ನಮೋ ಮಾತು
ಜನವರಿ 20 ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಪ್ರಮಾಣವಚನ ಸ್ವೀಕರಿಸಿದ ನಂತರ ಉಭಯ ನಾಯಕರ ನಡುವಿನ ಎರಡನೇ ದೂರವಾಣಿ ಸಂಭಾಷಣೆ ಇದಾಗಿದೆ. ಉಭಯ ನಾಯಕರ ನಡುವೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆದಿದೆ.