ಕರ್ನಾಟಕ

karnataka

By

Published : Mar 9, 2021, 5:15 PM IST

ETV Bharat / international

ಕೋವಿಡ್ ಲಸಿಕೆ ನೀತಿಯಿಂದ ಜಾಗತಿಕವಾಗಿ ಭಾರತ ಗುರುತಿಸಿಕೊಂಡಿದೆ: ಗೀತಾ ಗೋಪಿನಾಥ್​

ಭಾರತದ ಕೋವಿಡ್​ ಲಸಿಕೆ ನೀತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್, ಈ ಮೂಲಕ ಜಾಗತಿಕವಾಗಿ ಭಾರತ ಗುರುತಿಸಿಕೊಂಡಿದೆ ಎಂದಿದ್ದಾರೆ.

India at forefront in fighting COVID-19
ಕೋವಿಡ್ ಲಸಿಕೆ ನೀತಿಗೆ ಗೀತಾ ಗೋಪಿನಾಥ್​ ಶ್ಲಾಘನೆ

ವಿಶ್ವಸಂಸ್ಥೆ: ಕೋವಿಡ್​ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಲಸಿಕೆ ನೀತಿಯಿಂದ ಭಾರತ ಜಾಗತಿಕವಾಗಿ ಗುರುತಿಸಿಕೊಂಡಿದೆ ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ. ಕೋವಿಡ್​ ಸಂದಿಗ್ಧತೆಯ ಪರಿಸ್ಥಿತಿಯಲ್ಲಿ ಲಸಿಕೆ ತಯಾರಿಸಿ ಅಗತ್ಯವಿರುವ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವುದಕ್ಕೆ ಅವರು ಭಾರತವನ್ನು ಶ್ಲಾಘಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಡಾ.ಹನ್ಸಾ ಮೆಹ್ತಾ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ-ಅಮೆರಿಕನ್​ ಉನ್ನತ ಅರ್ಥಶಾಸ್ತ್ರಜ್ಞೆ, ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಶ್ವದ ಲಸಿಕೆ ಉತ್ಪಾದನಾ ಹಬ್​ ಯಾವುದೆಂದರೆ, ಅದು ಭಾರತ ಎಂದು ಅವರು ಹೇಳಿದರು.

ಸೆರಂ ಇನ್ಸ್​ಟ್ಯೂಟ್​ ಆಫ್ ಇಂಡಿಯಾ ಜಗತ್ತಿನಲ್ಲೇ ಅತೀ ಹೆಚ್ಚು ಲಸಿಕೆ ಉತ್ಪಾಸುತ್ತಿದೆ. ಅದು ಕೋವ್ಯಾಕ್ಸಿನ್‌ ಮೂಲಕ ದೇಶದ ಜನರಿಗೆ ಲಸಿಕೆ ವಿತರಿಸಿದಲ್ಲದೆ, ಜಗತ್ತಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ ಎಂದ ಗೀತಾ, ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಇದನ್ನೂ ಓದಿ: ರೈತ ಪ್ರತಿಭಟನೆ ಬಗ್ಗೆ ಬ್ರಿಟನ್​ ಶಾಸಕರ ಚರ್ಚೆ ಖಂಡಿಸಿದ ಭಾರತ

ಕೋವಿಡ್​ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ವಾಣಿಜ್ಯ ವ್ಯವಸ್ಥೆಗಳ ಮೂಲಕ ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ ಸೇರಿದಂತೆ ಹಲವಾರು ನೆರೆಹೊರೆಯವರಿಗೆ ಭಾರತ ಲಸಿಕೆ ನೀಡುತ್ತಿದೆ. ಲಸಿಕೆ ನೀತಿಗಳ ಮೂಲಕ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ನಡುವೆ ಜಗತ್ತಿಗೆ ಸಹಾಯ ಮಾಡುವಲ್ಲಿ ದೇಶವು ಪ್ರಮುಖ ಪಾತ್ರ ವಹಿಸುತ್ತಿದೆ.

ಭಾರತವು ಜಾಗತಿಕ ಲಸಿಕೆ ಹಬ್ ಆಗಿ ಹೊರ ಹೊಮ್ಮಿದ ಬಗ್ಗೆ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಚೇತರಿಕೆಯಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಕೊಳ್ಳುವ ಶಕ್ತಿ ಸಮಾನತೆಯ ನಿಯಮಗಳ ಆಧಾರದ ಮೇಲೆ ವಿಶ್ವ ಜಿಡಿಪಿಯಲ್ಲಿ ಭಾರತವು ಶೇಕಡಾ 7 ರಷ್ಟಿದೆ ಎಂದು ತಿಳಿಸಿದರು.

For All Latest Updates

ABOUT THE AUTHOR

...view details