ಕರ್ನಾಟಕ

karnataka

ETV Bharat / international

ಫ್ಲೋರಿಡಾದಲ್ಲಿ ಕಾಳ್ಗಿಚ್ಚು; ಅಪಾರ ಜೀವರಾಶಿಗೆ ಹಾನಿ, ನೂರಾರು ಜನರ ಸ್ಥಳಾಂತರ - Hundreds evacuated as wildfires rage in NW Florida

ಅಮೆರಿಕದ ಫ್ಲೋರಿಡಾದಲ್ಲಿ ಸಂಭವಿಸಿದ ಭಾರಿ ಕಾಳ್ಗಿಚ್ಚಿನಿಂದ ಅನೇಕ ಜೀವರಾಶಿಗಳು ಬಲಿಯಾಗಿದೆ ಎಂದು ವರದಿಯಾಗಿದೆ. ಘಟನೆಯಿಂದ ಸುತ್ತಮುತ್ತಲ ಪ್ರದೇಶದ ಹಲವು ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

wildfires
ಕಾಳ್ಗಿಚ್ಚು

By

Published : May 7, 2020, 8:39 PM IST

ಫ್ಲೋರಿಡಾ:ಇಲ್ಲಿನ ಫ್ಲೋರಿಡಾ ಪ್ಯಾನ್‌ಹ್ಯಾಂಡಲ್‌ನಲ್ಲಿ ಉದ್ಭವಿಸಿದ ಕಾಳ್ಗಿಚ್ಚಿನಿಂದ ಸುಮಾರು 500 ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲೋರಿಡಾದ ಸಾಂತಾ ರೋಸಾ ಕೌಂಟಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಕಾಳ್ಗಿಚ್ಚಿಗೆ ಐದು ಮೈಲುಗಳ ಜೌಗು ಬೆಂಕಿ(Five Mile Swamp fire) ಎಂದು ಹೆಸರಿಸಲಾಗಿದೆ.

ಫ್ಲೋರಿಡಾ ಕಾಳ್ಗಿಚ್ಚು

ಸುಮಾರು 2,000 ಎಕರೆ ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿಕೊಂಡು, ಅನೇಕ ಜೀವರಾಶಿಗಳು ಬಲಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಹೀಗಾಗಿ ಈ ಭಾಗದ ನಿವಾಸಿಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಈ 2,000 ಎಕರೆ ಪ್ರದೇಶದಲ್ಲಿ ಇನ್ನೂ ಸುಮಾರು 20% ದಷ್ಟು ಬೆಂಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details