ಕರ್ನಾಟಕ

karnataka

By

Published : Sep 24, 2019, 1:05 PM IST

ETV Bharat / international

ವಿಶ್ವನಾಯಕರ ಬೆವರಿಳಿಸಿದ ಈ ಬಾಲಕಿ ಮಾತಿಗೆ ರೋಹಿತ್ ಶರ್ಮಾ ಸೆಲ್ಯೂಟ್!

ಪ್ರಸ್ತುತ ನ್ಯೂಯಾರ್ಕ್​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ನಡೆಯುತ್ತಿದ್ದು, ಸೋಮವಾರದ ಸಭೆಯಲ್ಲಿ ಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಸಭೆ ಆಯೋಜನೆಯಾಗಿತ್ತು. ಈ ವೇಳೆ ಗ್ರೆಟಾ ಥಂಬರ್ಗ್ ಮಾತು ನೆರೆದಿದ್ದವರನ್ನು ಅಚ್ಚರಿ ಜೊತೆಗೆ ಭಾವುಕರನ್ನಾಗಿಸಿತು.

ವಿಶ್ವಸಂಸ್ಥೆಯಲ್ಲಿ ಗ್ರೆಟಾ ಥಂಬರ್ಗ್​ ಮಾತು

ನ್ಯೂಯಾರ್ಕ್​:ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಏರಿಕೆ ವಿರುದ್ಧ ಆಂದೋಲನದ ಹೋರಾಟಗಾರ್ತಿ 16 ಹರೆಯದ ಬಾಲಕಿಗ್ರೆಟಾ ಥಂಬರ್ಗ್,​ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಸಭೆಯಲ್ಲಿ ಜಾಗತಿಕ ನಾಯಕರನ್ನೇ ಧೈರ್ಯದಿಂದ ಪ್ರಶ್ನಿಸಿ ದಿಟ್ಟತನ ಮೆರೆದಿದ್ದಾಳೆ.

ಪ್ರಸ್ತುತ ನ್ಯೂಯಾರ್ಕ್​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ನಡೆಯುತ್ತಿದ್ದು, ಸೋಮವಾರದ ಸಭೆಯಲ್ಲಿ ಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಸಭೆ ಆಯೋಜನೆಯಾಗಿತ್ತು. ಈ ವೇಳೆ ಗ್ರೆಟಾ ಥಂಬರ್ಗ್ ಮಾತು ನೆರೆದಿದ್ದವರನ್ನು ಅಚ್ಚರಿ ಜೊತೆಗೆ ಭಾವುಕರನ್ನಾಗಿಸಿತು.

ವಿಶ್ವಸಂಸ್ಥೆಯಲ್ಲಿ ಗ್ರೆಟಾ ಥಂಬರ್ಗ್​ ಮಾತು

ಇದೆಲ್ಲಾ ತಪ್ಪು ಎನ್ನುತ್ತಾ ಮಾತು ಆರಂಭಿಸಿದ ಗ್ರೆಟಾ, ನಾನು ಇಲ್ಲಿ ಇರಬಾರದಿತ್ತು. ನಾನು ಯಾವುದೋ ಶಾಲೆಯಲ್ಲಿ ನನ್ನ ಪಾಡಿಗೆ ಓದುತ್ತಾ ಇರಬೇಕಿತ್ತು. ನೀವೆಲ್ಲಾ ನನ್ನ ಕನಸು ಹಾಗೂ ಬಾಲ್ಯವನ್ನು ಕಸಿದುಕೊಂಡಿದ್ದೀರ. ಇಲ್ಲಿ ಬಂದು ಸೇರಲು ನಿಮಗೆಷ್ಟು ಧೈರ್ಯ? ಜಾಗತಿಕ ಹವಾಮಾನ ಸರಿಪಡಿಸುವ ವಿಚಾರದಲ್ಲಿ ನೀವೆಲ್ಲರೂ ಸೋತಿದ್ದೀರ. ಜಾಗತಿಕ ನಾಯಕರು ತಮ್ಮ ರಾಜಕೀಯದಲ್ಲೇ ಬ್ಯುಸಿಯಾದರೆ ನಮ್ಮ ಜನಾಂಗ ಅತಿದೊಡ್ಡ ದುರಂತವನ್ನು ಎದುರಿಸಲಿದೆ. ಸದ್ಯ ಯುವ ಮನಸ್ಸಿಗೆ ನಿಮ್ಮ ಮೋಸದ ಅರಿವಾಗಿದೆ ಎಂದು ಬರುತ್ತಿರುವ ಕಣ್ಣೀರನ್ನು ತಡೆಯುತ್ತಾ ಗಟ್ಟಿ ಧ್ವನಿಯಲ್ಲಿ ತನ್ನ ಮನಸಿನ ನೋವು ಹೇಳಿದ್ದಾಳೆ.

ಯಾರೀ ಈ ಗ್ರೆಟಾ ಥಂಬರ್ಗ್?

ಸ್ವೀಡನ್ ದೇಶದ ಗ್ರೆಟಾ(16) ಕಳೆದೊಂದು ವರ್ಷದಿಂದ ಶಾಲೆ ತ್ಯಜಿಸಿ ಹವಾಮಾನ ಬದಲಾವಣೆ(Climate change) ವಿರುದ್ಧ ಹೋರಾಟ ನಡೆಸುತ್ತಿದ್ದಾಳೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸಲು ಗ್ರೆಟಾ ಎರಡು ವಾರಗಳ ಸೋಲಾರ್ ಬೋಟ್​​ನಲ್ಲಿ ಸ್ವೀಡನ್​ನಿಂದ ಅಮೆರಿಕಗೆ ಆಗಮಿಸಿದ್ದಾಳೆ.

ಕಾನೂನು ಹೋರಾಟ:

ಗ್ರೆಟಾ ಥಂಬರ್ಗ್​ ಸೋಮವಾರ ತಮ್ಮ ಕಾನೂನು ಹೋರಾಟ ಮುಂದುವರೆಸಿದ್ದು, ಹದಿನೈದು ಮಂದಿ ಯುವ ಜನತೆಯೊಂದಿಗೆ ಸೇರಿ ಒಂದಷ್ಟು ದೇಶಗಳ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿದ್ದಾಳೆ.

ಅರ್ಜೆಂಟಿನಾ, ಬ್ರೆಜಿಲ್, ಫ್ರಾನ್ಸ್, ಜರ್ಮನಿ ಹಾಗೂ ಟರ್ಕಿ ದೇಶಗಳು ಹವಾಮಾನ ಬದಲಾವಣೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಗ್ರೆಟಾ ಆರೋಪಿಸಿದ್ದಾಳೆ.

ಗ್ರೆಟಾ ಮಾತಿಗೆ ಹಿಟ್​ಮ್ಯಾನ್ ಸಲಾಂ:

ನಮ್ಮ ಪರಿಸರವನ್ನು ಸೂಕ್ತವಾಗಿರಿಸಿಕೊಳ್ಳದೆ ಮುಂದಿನ ಜನಾಂಗಕ್ಕೆ ನೀಡುವುದು ಉತ್ತಮ ನಡೆಯಲ್ಲ. ಗ್ರೆಟಾ ಥಂಬರ್ಗ್​ ಮಾತು ಮತ್ತು ಆಕೆಯ ಹೋರಾಟ ಎಲ್ಲರಿಗೂ ಸ್ಫೂರ್ತಿ. ಬದಲಾವಣೆಗಿದು ಸಕಾಲ ಎಂದು ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details