ಪೋರ್ಟ್-ಅವು-ಪ್ರಿನ್ಸ್ :ಪ್ರತಿಪಕ್ಷ ನಾಯಕರ ಬೆಂಬಲವಿರುವ ಓರ್ವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸೇರಿದಂತೆ,ತನ್ನನ್ನು ಕೊಲ್ಲಲು ಮತ್ತು ಸರ್ಕಾರ ಉರುಳಿಸಲು ಯತ್ನಿಸಿದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯೆಸ್ ತಿಳಿಸಿದ್ದಾರೆ.
ಕೋವಿಡ್ ನಡುವೆಯೂ ದಕ್ಷಿಣ ಕರಾವಳಿ ಪಟ್ಟಣವಾದ ಜಾಕ್ಮೆಲ್‌ಗೆ ವಾರ್ಷಿಕ ಕಾರ್ನಿವಲ್‌ನ ಉದ್ಘಾಟನಾ ಸಮಾರಂಭಕ್ಕೆ ಪೊಲೀಸ್ ಮುಖ್ಯಸ್ಥರೊಂದಿಗೆ ತೆರಳವ ವೇಳೆ, ಪೋರ್ಟ್-ಅವು-ಪ್ರಿನ್ಸ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮೊಯೆಸ್, ನನ್ನನ್ನು ಕೊಲ್ಲುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ.
ಓದಿ : ಪೊಲೀಸರ ಗುಂಡೇಟಿಗೆ ಬೀದಿ ಬದಿ ಕಲಾವಿದ ಬಲಿ.. ಜನರಲ್ಲಿ ಮಡುಗಟ್ಟಿದ ಶೋಕ
ಬಂಧಿತ ಆರೋಪಿಗಳಲ್ಲಿ ಓರ್ವ ನ್ಯಾಯಾಧೀಶ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಹೊರತುಪಡಿಸಿ ಉಳಿದವರ ಮಾಹಿತಿ ಲಭ್ಯವಾಗಿಲ್ಲ ಎಂದು ಮೊಯೆಸ್ ಹೇಳಿದ್ದಾರೆ. ಇನ್ನು, ಬಂಧಿತ ಆರೋಪಿಗಳ ಬಳಿ ಹಲವು ಶಸ್ತ್ರಾಸ್ತ್ರ ಪತ್ತೆಯಾಗಿವೆ. ಬಂಧಿತ ಸುಪ್ರೀಂಕೋರ್ಟ್ ನ್ಯಾಯಾಧೀಶ ಯವಿಕೆಲ್ ಡಬ್ರೆಜಿಲ್, ಮೊಯೆಸ್ ಅವರನ್ನು ಕೆಳಗಿಳಿಸಿ ತಾತ್ಕಾಲಿಕ ಅಧ್ಯಕ್ಷರಾಗಲು ಸಿದ್ದತೆ ಮಾಡಿಕೊಂಡಿದ್ದರು. ಸರ್ಕಾರ ಉರುಳಿದ ಬಳಿಕ ಅಧ್ಯಕ್ಷರಾಗುವ ಪ್ರತಿಪಕ್ಷಗಳ ಪಟ್ಟಿಯಲ್ಲಿ ಡಬ್ರೆಜಿಲ್ ಕೂಡ ಒಬ್ಬರು ಎಂದು ಪ್ರಧಾನ ಮಂತ್ರಿ ಜೋಸೆಫ್ ಜೌಟ್ ತಿಳಿಸಿದ್ದಾರೆ.