ಕರ್ನಾಟಕ

karnataka

ETV Bharat / international

ಕೊರೊನಾ ಪ್ರಕರಣಗಳು ಅಪಾಯಕಾರಿಯಲ್ಲ: ಟ್ರಂಪ್ ಹೇಳಿಕೆ ನಿರಾಕರಿಸಿದ ಅಧಿಕಾರಿಗಳು - ಕೊರೊನಾ ಪ್ರಕರಣಗಳು ಅಪಾಯಕಾರಿಯಲ್ಲ ಎಂದ ಟ್ರಂಪ್​

ಶೇ.99 ರಷ್ಟು ಕೊರೊನಾ ಸೋಂಕಿನ ಪ್ರಕರಣಗಳು ಅಪಾಯಕಾರಿಯಲ್ಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

FDA head rejects Trump's 'harmless' virus claim
ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ ಅಧಿಕಾರಿಗಳು

By

Published : Jul 6, 2020, 9:35 AM IST

ವಾಷಿಂಗ್ಟನ್ : ಶೇ. 99 ಕೊರೊನಾ ವೈರಸ್​ ಪ್ರಕರಣಗಳು ಅಪಾಯಕಾರಿಯಲ್ಲ ಎಂಬ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆಯನ್ನು ಬೆಂಬಲಿಸಲು ಆಹಾರ ಮತ್ತು ಡ್ರಗ್​ ಆಡಳಿತ ಆಯುಕ್ತ ಡಾ. ಸ್ಟೀಫನ್ ಹಾನ್ ನಿರಾಕರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಸಿರುವ ಅವರು, ಅವರು (ಅಧ್ಯಕ್ಷ) ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯಲು ಹೋಗುವುದಿಲ್ಲ. ಸರ್ಕಾರದ ಮಾಹಿತಿಯು, ಇದು ಗಂಭೀರ ಸಮಸ್ಯೆ ಎಂದು ಸ್ಪಷ್ಟವಾಗಿ ತೋರಿಸುತ್ತಿದೆ. ಆದ್ದರಿಂದ ಜನರು ಸೋಂಕು ಹರಡುವುದನ್ನು ತಡೆಯಲು ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದಿದ್ದಾರೆ.

ಯುಎಸ್​ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಮೂಲಕ ಶೇ.99 ರಷ್ಟು ಸೋಂಕಿನ ಪ್ರಕರಣಗಳು ಅಪಾಯಕಾರಿಯಲ್ಲ ಎಂಬುವುದನ್ನು ನಾವು ತೋರಿಸುತ್ತಿದ್ದೇವೆ ಎಂದು ಜುಲೈ 4 ರಂದು ಟ್ರಂಪ್ ತಪ್ಪು ಹೇಳಿಕೆ ನೀಡಿದ್ದರು.

ಇನ್ನು, ಟ್ರಂಪ್ ಹೇಳಿಕೆ ತಪ್ಪು ಮತ್ತು ಅಪಾಯಕಾರಿ ಎಂದು ಟೆಕ್ಸಾಸ್​​ನ ಆಸ್ಟಿನ್ ಮೇಯರ್ ಸ್ಟೀವ್ ಆಡ್ಲರ್​ ಹೇಳಿದ್ದು, ವಾಷಿಂಗ್ಟನ್‌ನಿಂದ ಹೊರಬರುವ ಅಸ್ಪಷ್ಟ ಸಂದೇಶಕ್ಕಿಂತ ಸ್ಥಳೀಯ ಅಧಿಕಾರಿಗಳ ಸಾರ್ವಜನಿಕ ಸುರಕ್ಷತಾ ಮಾರ್ಗದರ್ಶನಗಳನ್ನು ಪಾಲಿಸಿ ಎಂದಿದ್ದಾರೆ.

ಕೋವಿಡ್​ ಜೊತೆಗೆ ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶೇ. 20 ರಷ್ಟು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ABOUT THE AUTHOR

...view details