ರೋಸೌ (ಡೊಮಿನಿಕಾ):ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 3,500 ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭಾರತೀಯ ಮೂಲದ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಜಾಮೀನು ನೀಡಲು ಡೊಮಿನಿಕಾ ಹೈಕೋರ್ಟ್ ನಿರಾಕರಿಸಿದೆ. ಆತನಿಗೂ ಡೊಮಿನಿಕಾಗೂ ಯಾವುದೇ ಸಂಬಂಧವಿಲ್ಲ. ಚೋಕ್ಸಿ ಮತ್ತೆ ಪರಾರಿಯಾಗುವ ಸಾಧ್ಯತೆಯಿರುವುದರಿಂದ ಜಾಮೀನು ನೀಡಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಜಾಮೀನು ನೀಡಿದರೆ ಚೋಕ್ಸಿ ತನ್ನ ಸಹೋದರನೊಂದಿಗೆ ಹೋಟೆಲ್‌ನಲ್ಲಿ ಉಳಿಯುವುದಾಗಿ ಅವರ ಪರ ವಕೀಲರು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದು, ಹೋಟೆಲ್ ವಿಳಾಸದ ಬಗ್ಗೆ ಕೋರ್ಟ್ ಅನುಮಾನ ವ್ಯಕ್ತಡಿಸಿದೆ. ಅಲ್ಲದೇ ಯಾವುದೇ ಬಲವಾದ ಶ್ಯೂರಿಟಿಯನ್ನೂ ನೀಡಿಲ್ಲ ಎಂದು ಕೋರ್ಟ್ ತಿಳಿಸಿ ಜಾಮೀನು ನೀಡಲು ನಿರಾಕರಿಸಿದ್ದು, ಸದ್ಯಕ್ಕೆ ಭಾರತಕ್ಕೆ ತಕ್ಷಣವೇ ವಾಪಸಾಗುವುದರಿಂದ ಮಧ್ಯಂತರ ವಿನಾಯಿತಿಯನ್ನು ನೀಡಿದೆ.