ವಾಷಿಂಗ್ಟನ್: ಅಮೆರಿಕ ಮತ್ತು ಇಡೀ ವಿಶ್ವಕ್ಕೆ ಚೀನಾ ದೊಡ್ಡ ಮಟ್ಟದ ಹಾನಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಡೀ ವಿಶ್ವ ಮತ್ತು ಅಮೆರಿಕಕ್ಕೆ ಚೀನಾ ಅಪಾಯ ತಂದೊಡ್ಡಿದೆ ಎಂದಿದ್ದಾರೆ.

ಇದಕ್ಕೂ ಮುನ್ನ ಭಾನುವಾರ ಅವರು, ರಹಸ್ಯ, ವಂಚನೆ ಮತ್ತು ಮಾಹಿತಿ ಮುಚ್ಚಿಡುವಿಕೆಯ ಹೊಣೆಯನ್ನು ಆ ದೇಶ ಹೊರಬೇಕು. ಚೀನಾ ಅನುಸರಿಸಿದ ಈ ನಡೆಗಳಿಂದಲೇ ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡಲು ಕಾರಣವಾಯಿತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಟ್ರಂಪ್ ಚೀನಾ ವಿರುದ್ಧ ಆರೋಪ, ಆಕ್ರೋಶ ಹೊರ ಹಾಕುತ್ತಿರುವುದು ಇದೇ ಮೊದಲಲ್ಲ. ಕೊರೊನಾ ವೈರಸ್ ಅಮೆರಿಕವನ್ನು ಕಾಡುತ್ತಿರುವ ಪ್ರತಿ ಹಂತದಲ್ಲೂ ಅವರು ಡ್ರ್ಯಾಗನ್ ವಿರುದ್ಧ ಟೀಕಾ ಸಮರ ನಡೆಸಿದ್ದಾರೆ.