ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೋವಿಡ್ನಿಂದ ಸಾವನ್ನಪ್ಪಿದ 5 ಲಕ್ಷ ಜನರಿಗೆ ಶ್ವೇತಭವನದಲ್ಲಿ ಒಂದು ಕ್ಷಣ ಮೌನಾಚರಿಸಿ ಮತ್ತು ಮೇಣದ ಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
ಕೋವಿಡ್ಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಿರುವ ಜೋ ಬೈಡನ್
ಕೋವಿಡ್ ವೈರಸ್ಗೆ ಬಲಿಯಾದ ಅಮೆರಿಕಾದ ಲಕ್ಷಾಂತರ ಜನರಿಗೆ ಇಂದು ಸಂಜೆ ಅಧ್ಯಕ್ಷ ಜೋ ಬೈಡನ್, ಒಂದು ಕ್ಷಣ ಮೌನ ಮತ್ತು ಮೇಣದ ಬತ್ತಿ ಬೆಳಗುವ ಮೂಲಕ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಅಧ್ಯಕ್ಷ ಜೋ ಬೈಡನ್
ಕೊರೊನಾ ವೈರಸ್ನಿಂದ ಜೀವ ಕಳೆದುಕೊಂಡವರಿಗೆ ಸಂಜೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಅಮೆರಿಕಾದ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಸಹ ಮೌನಾಚರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.