ಕರ್ನಾಟಕ

karnataka

ETV Bharat / international

ವೀಸಾ ನಿರ್ಬಂಧಗಳ ವಿರುದ್ಧದ ಮೊಕದ್ದಮೆಗೆ ಬೆಂಬಲ ಸೂಚಿಸಿದ ಆಪಲ್​, ಅಮೆಜಾನ್​ ಫೇಸ್​ಬುಕ್​​ - ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ತಾತ್ಕಾಲಿಕ ವಿದೇಶಿ ಕಾರ್ಮಿಕರಿಗೆ ಹೊಸ ವೀಸಾಗಳನ್ನು ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಹೂಡಲಾಗಿರುವ ಮೊಕದ್ದಮೆಗೆ ತಂತ್ರಜ್ಞಾನ ದೈತ್ಯ ಕಂಪನಿಗಳು ಬೆಂಬಲ ನೀಡಿವೆ.

visa
visa

By

Published : Aug 12, 2020, 12:28 PM IST

ಸ್ಯಾನ್ ಫ್ರಾನ್ಸಿಸ್ಕೋ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ವಿದೇಶಿ ಕಾರ್ಮಿಕರಿಗೆ ಹೊಸ ವೀಸಾಗಳನ್ನು ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಮೊಕದ್ದಮೆಗೆ ಹೂಡಲಾಗಿದೆ.

ಈ ಮೊಕದ್ದಮೆಗೆ ಆಪಲ್, ಫೇಸ್‌ಬುಕ್, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಟ್ವಿಟರ್ ಸೇರಿದಂತೆ ತಂತ್ರಜ್ಞಾನ ದೈತ್ಯ ಕಂಪನಿಗಳು ಬೆಂಬಲ ನೀಡಿವೆ.

ಹೊಸ ವೀಸಾ ನಿರ್ಬಂಧಗಳು ಕೋವಿಡ್ -19 ಸಂದರ್ಭದಲ್ಲಿ ಯುಎಸ್ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಕಂಪನಿಗಳು ತಿಳಿಸಿವೆ ಎಂದು ದಿ ವರ್ಜ್ ವರದಿ ಮಾಡಿದೆ.

"ಅಮೆರಿಕದ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ವಲಸೆ ರಹಿತ ವೀಸಾವನ್ನು ಟ್ರಂಪ್ ಅಮಾನತುಗೊಳಿಸಿರುವುದು, ಆ ಕಾರ್ಮಿಕರಿಗೆ, ಅವರ ಉದ್ಯೋಗದಾತರಿಗೆ ಮತ್ತು ಆರ್ಥಿಕತೆಗೆ ಹಾನಿ ಮಾಡುತ್ತದೆ" ಎಂದು ಕಂಪನಿಗಳು ತಿಳಿಸಿವೆ. ಟ್ರಂಪ್​ ಅವರ ಈ ಕ್ರಮದಿಂದ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಗಾಗಿದ್ದಾರೆ.

ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಟ್ರಂಪ್​ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಕಂಪನಿಗಳು ಮಾತ್ರ ಟ್ರಂಪ್​​ ಅವರ ಈ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿವೆ.

ABOUT THE AUTHOR

...view details