ಕೆನಡಾ:ಇಲ್ಲಿನ ಬ್ರಿಟಿಷ್ ಕೊಲಂಬಿಯಾದಲ್ಲಿ ದಾಖಲೆಯ ಮಟ್ಟಕ್ಕೆ ತಾಪಮಾನ ಏರಿಕೆಯಾಗಿದೆ. ಸೂರ್ಯನ ಪ್ರಕೋಪಕ್ಕೆ 230ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
ಮಂಗಳವಾರ ಸತತ ಮೂರನೇ ದಿನ ಸಾರ್ವಕಾಲಿಕ ಅಧಿಕ ತಾಪಮಾನದ ದಾಖಲಾಗಿ ಅಪಾರ ಪ್ರಮಾಣದಲ್ಲಿ ಸಾವುನೋವು ಸಂಭವಿಸಿವೆ. ವ್ಯಾಂಕೋವರ್‌ನ ಪೂರ್ವಕ್ಕೆ 155 ಮೈಲಿ (250 ಕಿಲೋಮೀಟರ್) ದೂರದ ಬ್ರಿಟಿಷ್ ಕೊಲಂಬಿಯಾದ ಲಿಟ್ಟನ್‌ನಲ್ಲಿ 121 ಡಿಗ್ರಿ ಫ್ಯಾರನ್ ಹೀಟ್ (49.5 ಡಿಗ್ರಿ ಸೆಲ್ಸಿಯಸ್) ತಾಪಮಾನ ದಾಖಲಾಗಿತ್ತು ಎಂದು ಕೆನಡಾದ ಹವಾಮಾನ ಇಲಾಖೆ ತಿಳಿಸಿದೆ.