ನ್ಯೂಯಾರ್ಕ್: ಕ್ರಿಸ್‌ಮಸ್ ಹಬ್ಬದ ನಂತರ ಯುರೋಪ್ ಮತ್ತು ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕ್ರಿಸ್‌ಮಸ್ ವಾರಾಂತ್ಯದ ಜಾಗತಿಕ ಪ್ರಯಾಣವೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ವಿಶ್ವಾದ್ಯಂತ ಸುಮಾರು 11,500 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅನೇಕ ವಿಮಾನಗಳ ಪ್ರಯಾಣದ ಸಮಯವೂ ವಿಳಂಬವಾಗಿವೆ. ವರ್ಷದ ಅತ್ಯಂತ ಜನನಿಬಿಡ ಪ್ರಯಾಣದ ಅವಧಿಯಲ್ಲಿ ಕೊರೊನಾವೈರಸ್ ರೂಪಾಂತರ ಒಮಿಕ್ರಾನ್ ಪ್ರಕರಣಗಳಿಂದಾಗಿ ಸಿಬ್ಬಂದಿ ಕೊರತೆ ಉದ್ಭವಿಸಿದೆ ಎಂದು ಅನೇಕ ವಿಮಾನಯಾನ ಸಂಸ್ಥೆಗಳು ಹೇಳುತ್ತವೆ.