ಕರ್ನಾಟಕ

karnataka

ETV Bharat / international

5 ಹೆಣ್ಣು+ 4 ಗಂಡು=9: ಮಾಲಿಯಲ್ಲಿ ‘ನವ’ಜಾತ ಶಿಶುಗಳಿಗೆ ಜನ್ಮನೀಡಿದ ಮಹಾತಾಯಿ!

ಮಾಲಿಯಲ್ಲಿ ಗರ್ಭಿಣಿಯೊಬ್ಬರು ಏಕಕಾಲಕ್ಕೆ ಒಂಬತ್ತು ಶಿಶುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ತಾಯಿ ಸೇರಿದಂತೆ ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Mali Woman Gives Birth To Nine Babies
ಒಂಬತ್ತು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ

By

Published : May 5, 2021, 9:44 AM IST

Updated : May 5, 2021, 10:31 AM IST

ಬಮಾಕೊ (ಮಾಲಿ): ಮಾಲಿ ದೇಶದ ಗರ್ಭಿಣಿ ಮಂಗಳವಾರ ಒಂಬತ್ತು ಶಿಶುಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

25 ವರ್ಷದ ಹಲಿಮಾ ಸಿಸ್ಸೆ ಏಕಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿರುವುದು ಇದೀಗ ಜಾಗತಿಕ ಅಚ್ಚರಿಗೆ ಕಾರಣವಾಗಿದೆ. ಮಾರ್ಚ್​ನಲ್ಲಿ ವೈದ್ಯರು ಸಿಸ್ಸೆಗೆ ತಜ್ಞರ ಆರೈಕೆ ಬೇಕು ಎಂದು ಹೇಳಿದಾಗ, ಅವರನ್ನು ಮೊರಾಕ್ಕೋ ದೇಶಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಇಷ್ಟೊಂದು ಶಿಶುಗಳಿಗ ಜನ್ಮ ನೀಡಿದ್ದಾರೆ.

"ಈ ಒಂಬತ್ತು ನವಜಾತ ಶಿಶುಗಳಲ್ಲಿ ಐದು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳಿವೆ. ತಾಯಿ ಸೇರಿದಂತೆ ಮಕ್ಕಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ" ಎಂದು ಮಾಲಿಯ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಿಶುಗಳು

ಮೊರಾಕ್ಕೋ ಮತ್ತು ಮಾಲಿಯಲ್ಲಿ ನಡೆಸಿದ ಅಲ್ಟ್ರಾಸೌಂಡ್‌ ಸ್ಕ್ಯಾನ್​ ಪ್ರಕಾರ, ಸಿಸ್ಸೆ ಏಳು ಶಿಶುಗಳಿಗೆ ಜನ್ಮ ನೀಡುವ ನಿರೀಕ್ಷೆಯಿತ್ತು. ಆದರೆ ಒಂಬತ್ತು ಶಿಶುಗಳಿಗೆ ತಾಯಿಯಾಗಿದ್ದಾರೆ. ಸಿಸೇರಿಯನ್ ಮೂಲಕ ಯಶಸ್ವಿ ಹೆರಿಗೆ ಮಾಡಿಸಲಾಗಿದೆ.

ಇದನ್ನೂ ಓದಿ:ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಲಾಸ್‌ ಏಂಜಲೀಸ್‌ ಮೇಯರ್‌ ನೇಮಕ?

ನಾನಪ್ಲೆಟ್‌ಗಳ ಜನನ ಅತ್ಯಂತ ವಿರಳ

ಒಂದೇ ಬಾರಿಗೆ ಒಬ್ಬಳು ತಾಯಿಯಿಂದ ಜನಿಸಿದ ಒಂಬತ್ತು ಶಿಶುಗಳ ಗುಂಪನ್ನು ವೈದ್ಯಕೀಯ ಭಾಷೆಯಲ್ಲಿ ನಾನಪ್ಲೆಟ್ (nonuplet)​ ಎಂದು ಕರೆಯಲಾಗುತ್ತದೆ.

Last Updated : May 5, 2021, 10:31 AM IST

For All Latest Updates

TAGGED:

ABOUT THE AUTHOR

...view details