ಕರ್ನಾಟಕ

karnataka

ETV Bharat / international

ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೋಯಿಸ್ ಹತ್ಯೆ - haiti president murder

ಅಪರಿಚಿತರು ಹೈಟಿ ಅಧ್ಯಕ್ಷ ಜೊವೆನೆಲ್ ಮೋಯಿಸ್​ ಅವರ ಖಾಸಗಿ ನಿವಾಸದ ಮೇಲೆ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

Haiti President assassinated
ಹೈಟಿ ಅಧ್ಯಕ್ಷನ ಜೊವೆನೆಲ್ ಮೋಯಿಸ್ ಹತ್ಯೆ

By

Published : Jul 7, 2021, 4:59 PM IST

ಪೋರ್ಟ್ ಔ ಪ್ರಿನ್ಸ್(ಹೈಟಿ): ಹೈಟಿಯನ್ ಅಧ್ಯಕ್ಷ ಜೊವೆನೆಲ್ ಮೋಯಿಸ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಕೊಲೆ ಮಾಡಿದ್ದು, ಈ ಕುರಿತು ಹಂಗಾಮಿ ಪ್ರಧಾನ ಮಂತ್ರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಜೊವೆನೆಲ್ ಮೋಯಿಸ್ ಅವರ ಖಾಸಗಿ ನಿವಾಸದಲ್ಲಿ ಘಟನೆ ನಡೆಸಿದ್ದು, ಮೋಯಿಸ್ ಅವರ ಪತ್ನಿ ಮಾರ್ಟಿನ್ ಮೋಯಿಸ್ ಅವರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಂಗಾಮಿ ಪ್ರಧಾನ ಮಂತ್ರಿ ಕ್ಲೌಡೆ ಜೋಸೆಫ್​ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ದ್ವೇಷಪೂರಿತ, ಅಮಾನವೀಯ ಮತ್ತು ಬರ್ಬರ ಕೃತ್ಯ ಎಂದಿದ್ದಾರೆ.

ಹೈಟಿ ಪೊಲೀಸರು ರಾಷ್ಟ್ರಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದು, ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ABOUT THE AUTHOR

...view details