ನವದೆಹಲಿ: ಕರ್ನಾಟಕದ ಲೋಕಸಭಾ ಇತಿಹಾಸದಲ್ಲೇ ಚುನಾಯಿತರಾದ ಮೊದಲ ಮಹಿಳಾ ಪಕ್ಷೇತರ ಅಭ್ಯರ್ಥಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಸುಮಲತಾ ಅಂಬರೀಷ್ ಸಂಸತ್ತಿನಲ್ಲಿ ಮಹಿಳಾ ಸಮಾನತೆಯ ಬಗ್ಗೆ ದನಿ ಎತ್ತಿದ್ದಾರೆ.
ಲೋಕಸಭೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ನೀಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಶೇ50ರಷ್ಟು ಮೀಸಲು ಯಾಕೆ ನೀಡಬಾರದು..? ಕೆಳಮನೆಯಲ್ಲಿ ಅರ್ಧದಷ್ಟು ಮಹಿಳೆಯರು ಇರುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಂಡ್ಯ ಸಂಸದೆ ಸುಮಲತಾಗೆ ಕೈ ಮುಗಿದು ಗೌರವ ಸೂಚಿಸಿದ ಮೋದಿ
ಚುನಾವಣಾ ಪ್ರಚಾರದ ವೇಳೆ ಸಾಕಷ್ಟು ಬತ್ತಿಹೋದ ಕೆರೆಗಳನ್ನು ನೋಡಿದ್ದೇನೆ. ಮಹಿಳೆಯರು ಹಲವಾರು ಮೈಲಿಗಳ ದೂರದಿಂದ ನೀರಿನ್ನು ಹೊತ್ತು ತರುತ್ತಿದ್ದರು. ಈ ಬಗ್ಗೆ ಈಗಾಗಲೇ ನೀರಾವರಿ ಸಚಿವರನ್ನು ಭೇಟಿಯಾಗಿ ಮಾತನಾಡಿದ್ದೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮೊದಲ ದಿನವನ್ನು ಶಾಲೆಯ ಮೊದಲ ದಿನಕ್ಕೆ ಹೋಲಿಸಿದ ಸುಮಲತಾ ಅಂಬರೀಷ್, ಹೆದರಿಕೆ ಮತ್ತು ಕುತೂಹಲದಿಂದ ಸಂಸತ್ತಿಗೆ ಕಾಲಿಟ್ಟಿದ್ದು, ಇಲ್ಲಿನ ರೀತಿ ರಿವಾಜುಗಳನ್ನು ಕಲಿಯುತ್ತಿರುವುದಾಗಿ ಹೇಳಿದ್ದಾರೆ.