ಕರ್ನಾಟಕ

karnataka

ETV Bharat / headlines

ವೆಬ್​ ಜನಕ ಸರ್​ ಟಿಮ್ ಬರ್ನರ್ಸ್ ಲೀಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ 1976ರಲ್ಲಿ ಪದವಿ ಪಡೆದ ನಂತರ, ಬರ್ನರ್ಸ್-ಲೀ ಇಂಗ್ಲೆಂಡ್‌ನ ಡಾರ್ಸೆಟ್‌ನ ಪೂಲ್‌ನಲ್ಲಿರುವ ಪ್ಲೆಸ್ಸಿ ಟೆಲಿಕಮ್ಯುನಿಕೇಶನ್ಸ್ ಲಿಮಿಟೆಡ್‌ನಲ್ಲಿ ಎರಡು ವರ್ಷಗಳ ಕಾಲ ಕಂಪ್ಯೂಟರ್ ಸಾಫ್ಟ್‌ವೇರ್‌ನ ವಿನ್ಯಾಸಗೊಳಿಸಿದರು..

ವೆಬ್​ ಜನಕ ಸರ್​ ಟಿಮ್ ಬರ್ನರ್ಸ್ ಲೀ
ವೆಬ್​ ಜನಕ ಸರ್​ ಟಿಮ್ ಬರ್ನರ್ಸ್ ಲೀ

By

Published : Jun 8, 2021, 4:02 PM IST

ಹೈದರಾಬಾದ್ ​:ಇಂದು ವೆಬ್‌ನ ಜನಕ ಎಂದೇ ಖ್ಯಾತರಾಗಿರುವ ಸರ್​ ಟಿಮ್ ಬರ್ನರ್ಸ್ ಲೀ ಅವರ ಜನ್ಮದಿನ. ಪ್ರಸಿದ್ಧ ಟೈಮ್ ಮ್ಯಾಗಝಿನ್, ಲೀ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ ಶತಮಾನದ 100 ಖ್ಯಾತ ವಿಜ್ಞಾನಿ ತಂತ್ರಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ.

ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ವರ್ಲ್ಡ್ ವೈಡ್ ವೆಬ್(www)ಕನ್ಸೋರ್ಟಿಯಂನ ಅಧ್ಯಕ್ಷರಾಗಿ ಅನೇಕ ಹೊಸ ಹೊಸ ಯೋಜನೆಗಳನ್ನು ಇವರು ರೂಪಿಸಿದ್ದಾರೆ. ಲೀ ಅವರು ಬಳಸಿದ ಪ್ರಥಮ ತಾಣಸೂಚಿ ಎಂದರೆ ಅದು info.cern.ch ಈ ಜಾಲದಲ್ಲಿ ತಾಣಗಳ ರಚನೆಗೂ ಅವರು ಒಂದು ಸರಳ ಭಾಷೆ ಹುಟ್ಟು ಹಾಕಿದರು.

ಅದುವೇ ಹೈಪರ್ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್ (HTML). ಜಗತ್ತಿನಾದ್ಯಂತ ಎಲ್ಲ ಸಂಶೋಧಕರಿಗೆ ಇ-ಮೇಲ್​ ಕಳುಹಿಸಿ ತಮ್ಮ ಈ ಸಂಶೋಧನೆ ಬಳಸಲು ಕೇಳಿಕೊಂಡರು. ಇದರ ಮಹತ್ವ ಬಹು ಬೇಗನೆ ಹಲವಾರು ತಂತ್ರಜ್ಞರುಗಳಿಗೆ ಅರಿವಾಗಿ, ಅವರೆಲ್ಲ ಅದನ್ನು ಬಳಸತೊಡಗಿದರು. ಇದರ ಫಲವೇ ಇಂದು ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿ ಬಳಸುತ್ತಿರುವ ವಿಶ್ವವ್ಯಾಪಿ ಜಾಲ.

ಇನ್ನು, ಬ್ರಿಟಿಷ್ ಕಂಪ್ಯೂಟರ್ ವಿಜ್ಞಾನಿ ಸರ್ ಟಿಮ್ ಬರ್ನರ್ಸ್-ಲೀ ಜೂನ್ 8, 1955ರಂದು ಜನಿಸಿದರು. ಕಂಪ್ಯೂಟಿಂಗ್ ಸ್ವಾಭಾವಿಕವಾಗಿ ಬರ್ನರ್ಸ್-ಲೀಗೆ ಹುಟ್ಟಿನಿಂದಲೇ ಬಂದಿತ್ತು. ಏಕೆಂದರೆ, ಅವರ ಪೋಷಕರು ಇಬ್ಬರೂ ಮೊದಲ ವಾಣಿಜ್ಯ ಕಂಪ್ಯೂಟರ್ ಫೆರಾಂಟಿ ಮಾರ್ಕ್ Iನಲ್ಲಿ ಕೆಲಸ ಮಾಡುತ್ತಿದ್ದರು.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ 1976ರಲ್ಲಿ ಪದವಿ ಪಡೆದ ನಂತರ, ಬರ್ನರ್ಸ್-ಲೀ ಇಂಗ್ಲೆಂಡ್‌ನ ಡಾರ್ಸೆಟ್‌ನ ಪೂಲ್‌ನಲ್ಲಿರುವ ಪ್ಲೆಸ್ಸಿ ಟೆಲಿಕಮ್ಯುನಿಕೇಶನ್ಸ್ ಲಿಮಿಟೆಡ್‌ನಲ್ಲಿ ಎರಡು ವರ್ಷಗಳ ಕಾಲ ಕಂಪ್ಯೂಟರ್ ಸಾಫ್ಟ್‌ವೇರ್‌ನ ವಿನ್ಯಾಸಗೊಳಿಸಿದರು.

1980ರ ಜೂನ್​ನಿಂದ ಡಿಸೆಂಬರ್​ವರೆಗೆ ಜಿನೀವಾದಲ್ಲಿನ ಯುರೋಪಿಯನ್ ಭೌತಶಾಸ್ತ್ರ ಪ್ರಯೋಗಾಲಯವಾದ ಸಿಇಆರ್​ಎನ್​ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.

ಲೀ ಅವರ ಪ್ರಸಿದ್ಧ ಮಾತುಗಳಲ್ಲಿ ಈ ಹೇಳಿಕೆಯೂ ಒಂದಾಗಿದೆ : “ಜಾಲವನ್ನು ನಾನು ಊಹಿಸಿದಂತೆ ಇನ್ನೂ ನೋಡಿಲ್ಲ. ನಮ್ಮ ಭವಿಷ್ಯ, ಭೂತಕಾಲಕ್ಕಿಂತ ಅತೀ ದೊಡ್ಡದಾಗಿದೆ”

ABOUT THE AUTHOR

...view details