ಟೆಹ್ರಾನ್: ಇರಾನ್ ಸುಮಾರು 2.4 ಕೆಜಿಗಿಂತ ಹೆಚ್ಚು ಶಸ್ತ್ರಾಸ್ತ್ರ-ದರ್ಜೆಯ ಯುರೇನಿಯಂ ಉತ್ಪಾದಿಸಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ತಿಳಿಸಿದೆ. ಇದು ಅಂತಾರಾಷ್ಟ್ರೀಯ ಪರಮಾಣು ಒಪ್ಪಂದದ ಗಡಿಯನ್ನು ಮೀರಿ, ಅದನ್ನು ಇಷ್ಟು ಪ್ರಮಾಣದಲ್ಲಿ ತಯಾರಿಕೆ ಮಾಡಿದೆ ಎಂದು ಆರೋಪಿಸಲಾಗಿದೆ.
ಯುರೇನಿಯಂ ಶೇಕಡಾ 60ರಷ್ಟು ಶುದ್ಧತೆಯ ಮಟ್ಟಕ್ಕೆ ಸಮೃದ್ಧಗೊಳಿಸುವ ಕ್ರಮ ಏಪ್ರಿಲ್ನಲ್ಲಿ ನಡೆದಿದೆ ಎಂದು ಐಎಇಎ ಮುಖ್ಯಸ್ಥ ರಾಫೆಲ್ ಗ್ರೊಸಿ ಮಾಹಿತಿ ನೀಡಿದ್ದಾರೆ. 2018ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಹೊರ ಬಂದ ನಂತರ, ಇರಾನ್ ಒಪ್ಪಂದದ ವಿವಿಧ ಅಂಶಗಳನ್ನು ನಿರ್ಲಕ್ಷಿಸಲು ಮುಂದಾಗಿದೆ.
ಯುಎಸ್ ಆಡಳಿತದೊಂದಿಗಿನ ಒಪ್ಪಂದದ ಆವೃತ್ತಿಯನ್ನು ಪುನಃ ಸ್ಥಾಪಿಸಲು ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಇರಾನ್ ಪರಮಾಣು ವಿಷಯದಲ್ಲಿ ತನ್ನ ಕೆಲಸವನ್ನು ಮಾಡುತ್ತಿದೆ.