ಚಾಮರಾಜನಗರ:ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಸುಧಾಕರ್ ಸುದ್ದಿಗೋಷ್ಠಿ ಬಳಿಕ ಗರಂ ಆದ ಕಾಂಗ್ರೆಸ್ ಶಾಸಕರಾದ ಆರ್.ನರೇಂದ್ರ ಮತ್ತು ಸಿ.ಪುಟ್ಟರಂಗ ಶೆಟ್ಟಿ ಸಾವಿನ ಪ್ರಕರಣಗಳ ಸಂಖ್ಯೆಗಳನ್ನೇ ಮುಚ್ಚಿಡುತ್ತಿದ್ದಾರೆಂದು ಗಂಭೀರ ಮಾಡಿದರು.
ಭಾನುವಾರ ಹನೂರಿನಲ್ಲಿ ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಆದರೆ, ಇಂದು ಸಚಿವ ಸುಧಾಕರ್ ನೀಡಿದ ಮೃತರ ವಿವರಗಳಲ್ಲಿ ನಮ್ಮ ತಾಲೂಕಿನ ಮೂವರ ಹೆಸರೇ ಇಲ್ಲ, ಇಡೀ ಅಂಕಿ ಅಂಶಗಳೇ ಸುಳ್ಳಾಗಿದೆ. ಜೊತೆಗೆ, ಸತ್ತವರ ಸಮಯವನ್ನು ಸುಳ್ಳು ಹೇಳಿದ್ದು ರಾತ್ರಿ ಸಮಯದಲ್ಲೇ ಹೆಚ್ಚು ಮಂದಿ ಮೃತಪಟ್ಟರು, ಮೂವರು ಮಾತ್ರ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆಮ್ಲಜನಕದ ಕೊರತೆಯಿಂದಲೇ ಅಸುನೀಗಿದ್ದಾರೆ ಎಂದು ಹನೂರು ಶಾಸಕ ಆರ್.ನರೇಂದ್ರ ಗಂಭೀರ ಆರೋಪ ಮಾಡಿದ್ದಾರೆ.