ಕರ್ನಾಟಕ

karnataka

ETV Bharat / entertainment

'ನಿಕಮ್ಮ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಶಿಲ್ಪಾ ಶೆಟ್ಟಿ, ಅಭಿಮನ್ಯು ದಸ್ಸಾನಿ - ಅಭಿಮನ್ಯು ದಸ್ಸಾನಿ

'ನಿಕಮ್ಮ' ಸಿನಿಮಾದ ಎರಡನೇ ಪೊಸ್ಟರ್​ ಬಿಡುಗಡೆ ಮಾಡಲಾಗಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅಭಿಮನ್ಯು ದಸ್ಸಾನಿ ನಿನ್ನೆ ಚಿತ್ರದ ಹೊಸ ಪೋಸ್ಟರ್​ವೊಂದನ್ನ ಬಿಡುಗಡೆ ಮಾಡಿ, ಜೂನ್​ 17ರಂದು ಸಿನಿಮಾ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ ಎಂದರು.

ನಿಕಮ್ಮ ಚಿತ್ರದ ಪೋಸ್ಟರ್ ಬಿಡುಗಡೆ
ನಿಕಮ್ಮ ಚಿತ್ರದ ಪೋಸ್ಟರ್ ಬಿಡುಗಡೆ

By

Published : Jun 1, 2022, 7:55 AM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಶೆರ್ಲಿ ಸೆಟಿಯಾ, ಭಾಗ್ಯಶ್ರೀ ಅವರ ಮಗ ಅಭಿಮನ್ಯು ದಸ್ಸಾನಿ ಅಭಿನಯದ ಮುಂಬರುವ ಆ್ಯಕ್ಷನ್​, ಕಾಮಿಡಿ, ರೊಮ್ಯಾಂಟಿಕ್ 'ನಿಕಮ್ಮ' ಸಿನಿಮಾದ ಹೊಸ ಪೋಸ್ಟರ್​ವೊಂದನ್ನ ನಿನ್ನೆ ಬಿಡುಗಡೆ ಮಾಡಲಾಯಿತು.

ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ, ಇದು 'ನಿಕಮ್ಮ' ಸಿನಿಮಾದ ಎರಡನೇ ಪೊಸ್ಟರ್​, ಅಭಿಮನ್ಯು ಈ ಪೋಸ್ಟರ್​ ಅನ್ನು ನನಗೆ ಗಿಫ್ಟ್​ ನೀಡಿದ್ದಾರೆ. ಚಿತ್ರದ ಕತೆಯು ತುಂಬಾ ಚೆನ್ನಾಗಿದೆ, ಎಲ್ಲರೂ ತಪ್ಪದೇ ನೋಡಿ ಎಂದರು.

ಸದ್ಯಕ್ಕೆ ಫ್ಯಾಮಿಲಿ ಕಡೆ ಹೆಚ್ಚು ಗಮನ ಹರಿಸುತ್ತಿರುವ ಶಿಲ್ಪಾ ಶೆಟ್ಟಿ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಪಾತ್ರ ಉತ್ತಮವಾಗಿದ್ದರೆ ಮಾತ್ರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. 'ನಿಕಮ್ಮ' ಚಿತ್ರದಲ್ಲಿ ಶಿಲ್ಪಾ, ದೇವಿ ಹಾಗೂ ಸೂಪರ್​ ವುಮನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೋನಿ ಪಿಕ್ಚರ್ಸ್ ಇಂಟರ್​​ ನ್ಯಾಷನಲ್ ಪ್ರೊಡಕ್ಷನ್ಸ್ ಮತ್ತು ಸಬ್ಬೀರ್ ಖಾನ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರ ಎರಡು ವರ್ಷಗಳ ಹಿಂದೆಯೇ ತೆರೆಗೆ ಬರಬೇಕಿತ್ತು. ಆದರೆ, ಈಗ ಜೂನ್​ 17ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

ನಿಕಮ್ಮ ಚಿತ್ರದ ಪೋಸ್ಟರ್ ಬಿಡುಗಡೆ

ಇದನ್ನೂ ಓದಿ:'ನಿಕಮ್ಮ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಣ್ಣಂಚಲಿ ನೀರು ತಂದುಕೊಂಡ ಶಿಲ್ಪಾ ಶೆಟ್ಟಿ

ABOUT THE AUTHOR

...view details