ಏ.3ರಂದು ಎಂಜಿಎಂ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ 2022ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ, ಸ್ಟೀವರ್ಟ್ ಕೋಪ್‌ಲ್ಯಾಂಡ್ ಅವರ ಡಿವೈನ್ ಟೈಡ್ಸ್ ಆಲ್ಬಂ ಆಯ್ಕೆ ಆಗಿತ್ತು. ಡಿವೈನ್ ಟೈಡ್ಸ್ ಹಾಡನ್ನು ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಾಣ ಮಾಡಿತ್ತು. ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಗೆ ಆಯ್ಕೆ ಆಗಿದ್ದು, ರಿಕ್ಕಿ ಕೇಜ್ 'ಗ್ರ್ಯಾಮಿ ಅವಾರ್ಡ್' ಪಡೆದುಕೊಂಡಿದ್ದಾರೆ.
ಧನ್ಯವಾದ ತಿಳಿಸಿದ ರಿಕ್ಕಿ : ಡಿವೈನ್ ಟೈಡ್ಸ್ ಹಾಡಿಗೆ ನಾವು ಇಂದು ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದೇವೆ. ನಾನು ತುಂಬ ಕೃತಜ್ಞತಾಪೂರ್ವನಾಗಿದ್ದೇನೆ. ನನ್ನ ಪಕ್ಕದಲ್ಲಿ ನಿಂತಿರುವ ಲಿವಿಂಗ್ ಲೆಜೆಂಡ್ ಸ್ಟೀವರ್ಟ್ ಕೋಪ್‌ಲ್ಯಾಂಡ್‌ಗೆ ಧನ್ಯವಾದಗಳು. ನನಗೆ ಇದು ಎರಡನೇ ಗ್ರ್ಯಾಮಿ ಅವಾರ್ಡ್. ಸ್ಟೀವರ್ಟ್‌ಗೆ 6ನೇ ಗ್ರ್ಯಾಮಿ ಅವಾರ್ಡ್. ನನ್ನ ಜತೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಿಕ್ಕಿ ಕೇಜ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.