ಕರ್ನಾಟಕ

karnataka

ETV Bharat / entertainment

ನೈಸಾ ಬಾಲಿವುಡ್‌ಗೆ ಎಂಟ್ರಿ ಕೊಡುವ ಪ್ಲಾನ್ ಮಾಡುತ್ತಿದ್ದಾರಾ?: ಪುತ್ರಿ ಬಗ್ಗೆ ಅಜಯ್ ದೇವಗನ್ ಹೇಳಿದ್ದಿಷ್ಟು! - ಅಜಯ್ ದೇವಗನ್ ಪುತ್ತಿ ನೈಸಾ

ಇತ್ತೀಚಿನ ಸಂದರ್ಶನವೊಂದರಲ್ಲಿ, ಅಜಯ್ ದೇವಗನ್ ಬಾಲಿವುಡ್‌ಗೆ ಮಗಳ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.

Ajay Devgn on daughter Nysa entering Bollywood
ಅಜಯ್ ದೇವಗನ್, ನೈಸಾ

By

Published : Apr 27, 2022, 2:26 PM IST

ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ - ನಿರ್ದೇಶಕ ಅಜಯ್ ದೇವಗನ್ ಅವರು ತಮ್ಮ ಹೊಸ ಚಿತ್ರ 'ರನ್‌ವೇ 34' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ಅವರು ಸದ್ಯ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ಸಮಯದಲ್ಲಿ, ಅಜಯ್ ತಮ್ಮ ಮಗಳು ನೈಸಾ ದೇವಗನ್ ಅವರ ಬಾಲಿವುಡ್ ಕನಸುಗಳ ಬಗ್ಗೆ ಮಾತನಾಡಿದರು.

ರನ್‌ವೇ 34 ರ ಪ್ರಚಾರದ ಸಂದರ್ಶನದಲ್ಲಿ, ನಿಮ್ಮ ಮಕ್ಕಳು ನೈಸಾ ಮತ್ತು ಯುಗ್ ಅವರು ಸಿನಿಮಾ ರಂಗ ಪ್ರವೇಶಿಸಲು ಬಯಸುತ್ತೀರಾ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅಜಯ್ ದೇವಗನ್​​ ನೈಸಾ ಮತ್ತು ಯುಗ್ ಅವರಿಗೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ. ಇಲ್ಲಿಯವರೆಗೆ ಅವರು ಅದರಲ್ಲಿ ಆಸಕ್ತಿ ತೋರಿಸಿಲ್ಲ. ಸದ್ಯ ನೈಸಾ ವಿದೇಶದಲ್ಲಿ ಓದುತ್ತಿದ್ದಾಳೆ. ನಾನು ಮತ್ತು ಕಾಜೋಲ್ ಮಕ್ಕಳು ತಮ್ಮ ಭವಿಷ್ಯಕ್ಕಾಗಿ ಏನು ನಿರ್ಧರಿಸಿದರೂ ಅವರಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದರು.

1999ರಲ್ಲಿ ಅಜಯ್ ದೇವಗನ್​​ ನಟಿ ಕಾಜೋಲ್ ಅವರನ್ನು ವಿವಾಹವಾದರು. ದಂಪತಿ ನೈಸಾ ಹಾಗೂ ಯುಗ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕಾಜೋಲ್ ಆಗಾಗ ತನ್ನ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಒಳಗೊಂಡ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ:ಟ್ರೋಲ್​​ ಆದ ಸ್ಟಾರ್​ ಜೋಡಿ ಮಗಳ ರೂಪರಾಶಿಗೆ ನೆಟ್ಟಿಗರು ಫಿದಾ​

ABOUT THE AUTHOR

...view details