ಡಾ. ರಾಜ್ ಕುಮಾರ್ ಮನೆಯನ್ನ ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂತಾ ಕರೆಯಲಾಗುತ್ತೆ. ಈ ದೊಡ್ಮನೆಯ ಕಿರೀಟದಂತೆ ಇದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಐದು ತಿಂಗಳು ಕಳೆಯುತ್ತಿವೆ. ಈಗ ದೊಡ್ಮನೆಯಲ್ಲಿ ಶಿವರಾಜ್ ಕುಮಾರ್ ಬಳಿಕ, ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್ ಕುಮಾರ್ ಅವರನ್ನು ಪವರ್ ಸ್ಟಾರ್ನಂತೆ ಬೆಳೆಸಲು ರಾಜವಂಶದ ಅಭಿಮಾನಿಗಳು ಕನಸು ಕಂಡಿದ್ದಾರೆ.
ಪುನೀತ್ ಅಣ್ಣನ ಮಗ ಯುವರಾಜ್ ಕುಮಾರ್ ಚಿತ್ರ ಯುವ ರಾಜ್‌ಕುಮಾರ್ ಹೀರೋ ಆಗಲು ಭರ್ಜರಿ ತಾಲೀಮು ನಡೆಸಿದ್ದಾರೆ. ಈಗಾಗಲೇ ಯುವ ರಣಧೀರ ಕಂಠೀರವ ಚಿತ್ರದ ಟೀಸರ್ ಮೂಲಕ ಕನ್ನಡ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು. ಆದರೆ ಯುವರಾಜ್ ಕುಮಾರ್ ಒಮ್ಮೆಯೂ ತೆರೆಯ ಮೇಲೆ ಬಂದಿಲ್ಲ. ಅದಾಗಲೇ ಯುವರಾಜ್ ಕುಮಾರ್ಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ.
ಯುವರಾಜ್ ಕುಮಾರ್ ಮೊದಲ ಚಿತ್ರಕ್ಕಾಗಿ ದೊಡ್ಮನೆ ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಪುನೀತ್ ರಾಜ್‌ಕುಮಾರ್ ಇರಬೇಕಾದರೆ ಯುವ ರಣಧೀರ ಕಂಠೀರವ ಚಿತ್ರದ ಟೀಸರ್ ಲಾಂಚ್ ಆಗಿತ್ತು. ಟೀಸರ್ ಮತ್ತು ಫಸ್ಟ್ ಲುಕ್ ಸಿಕ್ಕಾಪಟ್ಟೇ ಹವಾ ಕ್ರಿಯೇಟ್ ಮಾಡಿತ್ತು.ಆದರೆ ಪವರ್ ಸ್ಟಾರ್ ನಿಧನದ ನಂತ್ರ ಎಲ್ಲವೂ ಬದಲಾಗಿದೆ. ಯುವರಾಜ್ ಕುಮಾರ್ಗೆ ಈ ಹಿಂದೆ ರಾಜಕುಮಾರ, ಯುವರತ್ನ ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡ್ತಾರೆ ಅಂತಾ ಮಾತುಗಳು ಕೇಳಿ ಬಂದಿದ್ವು. ಈಗ ಈ ಮಾತು ನಿಜವಾಗಿದೆ.
ಓದಿ:ನಾಳೆಯಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟಿಕೆಟ್ ಬುಕ್ಕಿಂಗ್ ಶುರು
ಹೌದು ಯುವರಾಜ್ ಕುಮಾರ್ ಸಿನಿಮಾಗೆ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವುದು ಪಕ್ಕಾ ಆಗಿದೆ. ಈ ಚಿತ್ರವನ್ನ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ಅದ್ದೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಯುವರಾಜ್ ಕುಮಾರ್ ಬೊಂಬಾಟ್ ಫೋಟೊಶೂಟ್ ಮಾಡುವ ಮೂಲಕ ಈ ಹೆಸರಿಡದ ಸಿನಿಮಾದ ಕೆಲಸಗಳು ಶುರುವಾಗಿವೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಪರಿಕಲ್ಪನೆಯಲ್ಲಿ ಫೋಟೊಶೂಟ್ ಮಾಡಿದ್ದಾರೆ ಅಂತಾ ದೊಡ್ಮನೆ ಅಭಿಮಾನಿಗಳ ಮಾತು.
ನಿರ್ದೇಶಕ ಸಂತೋಷ್ ಜೊತೆ ನಟ ಯುವರಾಜ್ಕುಮಾರ್ ರಾಜ್ ಕುಟುಂಬದ ಹೊಸ ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದೆ. ಹಾಗಾಗಿ ಯುವ ರಾಜ್‌ಕುಮಾರ್ ಮೂವಿ ಲಾಂಚ್ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಹೀಗಾಗಿ ಅಣ್ಣಾವ್ರ ಹುಟ್ಟು ಹಬ್ಬ ಏಪ್ರಿಲ್ 24ಕ್ಕೆ ಈ ಸಿನಿಮಾದ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ ಅಂತಾ ಹೇಳಲಾಗುತ್ತಿದೆ. ಆದರೆ ಯುವರಾಜ್ ಕುಮಾರ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಲು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪ್ಲಾನ್ ನಡೆಸಿದೆ ಅಂತಾ ಹೇಳಲಾಗುತ್ತಿದೆ.
ಪುನೀತ್ ಅಣ್ಣನ ಮಗ ಯುವರಾಜ್ ಕುಮಾರ್ ಯುವರಾಜ್ ರಾಜ್ ಕುಮಾರ್ ಮೊದಲ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿವೆ. ಆದರೆ ಸಾಮಾನ್ಯವಾಗಿ ಯುವ ರಾಜ್‌ಕುಮಾರ್ ನೋಡಿದರೆ ಅವರಿಗೆ ರಗಡ್ ಪಾತ್ರ ಒಪ್ಪುತ್ತೆ ಎನಿಸುತ್ತದೆ. ಆದರೆ ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.