ಕರ್ನಾಟಕ

karnataka

ETV Bharat / entertainment

ಚಿಕ್ಕಪ್ಪನ ಹುಟ್ಟುಹಬ್ಬದಂದು ಸೆಟ್ಟೇರಲಿದೆ ಯುವ ರಾಜ್​ಕುಮಾರ್ ಮೊದಲ ಸಿನಿಮಾ - puneeth rajkumar

ದಿ. ಪುನೀತ್​ ರಾಜ್​ಕುಮಾರ್ ಜನ್ಮ ದಿನದಂದು ಯುವ ರಾಜ್​ಕುಮಾರ್ ಅವರ ಮೊದಲ ಚಿತ್ರ ಸೆಟ್ಟೇರಲಿದೆ.

yuva rajkumar first movie
ಯುವ ರಾಜ್​ಕುಮಾರ್ ಮೊದಲ ಸಿನಿಮಾ

By

Published : Feb 10, 2023, 8:41 PM IST

ದೊಡ್ಮನೆ‌ ಕುಡಿ‌ ಯುವ ರಾಜ್​ಕುಮಾರ್ ಮೊದಲ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರೆ ಚೊಚ್ಚಲ ಚಿತ್ರ ಇನ್ನೂ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯುವ ರಾಜ್​​ಕುಮಾರ್​ ಜೊತೆ ಯಾವಾಗ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಾರೆ ಅನ್ನೋ ಕ್ಲಾರಿಟಿ ಸಿಕ್ಕಿಲ್ಲ. ಈ ಮಧ್ಯೆ ಯುವ ಅವರು ತಮ್ಮ ಮೊದಲ ಚಿತ್ರದ ಶೂಟಿಂಗ್ ಯಾವಾಗ ಆರಂಭಿಸ್ತಾರೆ ಅನ್ನೋ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ಪುನೀತ್​ ರಾಜ್​​ಕುಮಾರ್​ ಅವರಿಗೆ ರೆಡಿಯಾಗಿದ್ದ ಕಥೆಗೆ ಯುವ ರಾಜ್​ಕುಮಾರ್ ಜೀವ ತುಂಬಲಿದ್ದಾರೆ​ ಅನ್ನೋ ಸಮಾಚಾರ ಅಪ್ಪು ಅಭಿಮಾನಿಗಳ ಅಂಗಳ ಸೇರಿದ್ಮೇಲೆ ಯುವ ರಾಜ್​ಕುಮಾರ್​ ಅವರ ಮೊದಲ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಂತೆ ಬೆಳೆದು ನಿಂತಿದೆ. ಅದರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇನ್ನೂ ಕೂಡ ಚಿತ್ರದ ಶೂಟಿಂಗ್ ಶುರು ಮಾಡದೇ 'ಪರಮಾತ್ಮ'ನ ಅರಾಧಕರಿಗೆ ನಿರಾಸೆ ಮೂಡಿಸಿದ್ದಾರೆ.

ಯುವ ರಾಜ್​ಕುಮಾರ್

ಹೊಂಬಾಳೆ ಫಿಲ್ಮ್ಸ್​ನಿಂದ ಯುವ ರಾಜ್​ಕುಮಾರ್ ಸಿನಿಮಾ ಅನೌನ್ಸ್ ಆಗಿ ಏಳೆಂಟು ತಿಂಗಳುಗಳೇ ಕಳೆದವು. ಅದ್ರೂ ಚಿತ್ರದ ಶೂಟಿಂಗ್ ಬಗ್ಗೆ ಯಾವುದೇ ಅಪ್​ಡೇಟ್ ಚಿತ್ರತಂಡದ ಕಡೆಯಿಂದ ಇಲ್ಲ.​ ಅಪ್ಪು ನಮ್ಮೊಂದಿಗಿದ್ದಾಗಲೇ ಕಥೆ ರೆಡಿ ಆಗಿದ್ರೂ ಕೂಡ ಶೂಟಿಂಗ್ ಶುರು ಮಾಡಲು ಸಂತೋಷ್ ಆ್ಯಂಡ್ ಟೀಮ್ ಯಾಕಿಷ್ಟು ತಡ ಮಾಡ್ತಿದೆ ಅನ್ನೋದು ಅಪ್ಪು ಅಭಿಮಾನಿಗಳು ಮಾತ್ರವಲ್ಲ ಸಿನಿಮಾ ಮಂದಿಗೂ ಯಕ್ಷ ಪ್ರಶ್ನೆಯಾಗಿದೆ.

ಸಂತೋಷ್ ಆನಂದ್ ರಾಮ್ ಟೀಮ್ ಈಗಾಗಲೇ ಪ್ರೀ ಪ್ರೋಡಕ್ಷನ್ಸ್ ಕೆಲಸ ಕಂಪ್ಲೀಟ್ ಮಾಡಿದೆ. ಅಲ್ಲದೇ ಜನವರಿ ಕೊನೆ ವಾರದಲ್ಲಿ ಶೂಟಿಂಗ್ ಶುರು ಮಾಡಲು ಪ್ಲ್ಯಾನ್​ ಕೂಡ ಮಾಡಿದ್ರು. ಅದ್ರೆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಮಲೆಯಾಳಿ ಬೆಡಗಿ ಕಲ್ಯಾಣಿ ಪ್ರಿಯದರ್ಶನಿ ಡೇಟ್ ಕ್ಲಾಶ್ ಆಗಿ ಚಿತ್ರದಿಂದ ಹೊರಹೋದ ಕಾರಣ ಚಿತ್ರದ ಶೂಟಿಂಗ್ ಶುರು ಮಾಡೋದು ಕೊಂಚ ತಡ ಆಗಿದೆ ಅನ್ನೋ ವಿಚಾರ ಯುವ ರಾಜ್​ಕುಮಾರ್ ಆಪ್ತರಿಂದ ಲಭ್ಯವಾದ ಮಾಹಿತಿ. ಅಲ್ಲದೇ ಈಗ ಹೊಸ ನಾಯಕಿಯ ಹುಡುಕಾಟದಲ್ಲಿರುವ ಹೊಂಬಾಳೆ ಫಿಲ್ಮ್ಸ್​ ಒಂದೊಳ್ಳೆ ಡೇಟ್ ಫಿಕ್ಸ್ ಮಾಡಿ ಚಿತ್ರದ ಶೂಟಿಂಗ್​ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಅಪ್ಪು ನೆನಪಲ್ಲಿ, ಅಪ್ಪು ಆಶೀರ್ವಾದೊಂದಿಗೆ ಅಪ್ಪು ಕಥೆಗೆ ಯುವನಿಂದ ಜೀವ ತುಂಬಿಸಿ ಅಭಿಮಾನಿಗಳಿಗೆ ಅರ್ಪಿಸಲು ಪ್ಲ್ಯಾನ್​ ‌ಮಾಡಿರುವ ಹೊಂಬಾಳೆ ಫಿಲ್ಮ್ಸ್ ಈಗ ಶೂಟಿಂಗ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಜನ್ಮದಿನದಂದೇ‌ ಶುರು ಮಾಡಲು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಮಾರ್ಚ್ 17ಕ್ಕೆ ಪ್ರೀತಿಯ ಚಿಕ್ಕಪ್ಪನ ಜನ್ಮದಿನದಂತೆ ಬಣ್ಣಹಚ್ಚಿ ಬಣ್ಣದ‌ ಬದುಕಿಗೆ ಬಲಗಾಲಿಡಲು ಯುವ ರಾಜ್​ಕುಮಾರ್ ಕೂಡ ತೆರೆ ಮರೆಯಲ್ಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ವಿಡಿಯೋ: ಸಿದ್ಧಾರ್ಥ್-ಕಿಯಾರಾ ಮದುವೆಯ ಸುಮಧುರ ಕ್ಷಣಗಳು

ಈಗಾಗಲೇ ಸಂತೋಷ್ ಅನಂದ್ ರಾಮ್ ಚಿತ್ರಕ್ಕೆ ಬೇಕಾದ ಎಲ್ಲಾ ಲೊಕೇಶನ್​ಗಳನ್ನು ಫೈನಲ್ ಆಗಿದೆ. ಅಪ್ಪು ಹುಟ್ಟು ಹಬ್ಬದ ಒಳಗೆ ಚಿತ್ರಕ್ಕೆ ನಾಯಕಿಯನ್ನು ಕೂಡ ಆಯ್ಕೆ ಮಾಡಲಾಗುವುದು. ಒಟ್ಟಾರೆ ಯುವ ರಾಜ್​ಕುಮಾರ್​ ಸಿನಿಮಾ ಬಗ್ಗೆ ಕೋಟ್ಯಂತರ ಅಭಿಮಾನಿ ಬಳಗದಲ್ಲಿ ಸಂಭ್ರಮ ಮನೆ ಮಾಡಿದೆ.

ABOUT THE AUTHOR

...view details