ಮುಂಬೈನಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ 2023ರ ಗ್ರ್ಯಾಂಡ್ ಬ್ರೈಡಲ್ ಕೌಚರ್ ಶೋನ ಆಯೋಜಿಸಿದ್ದರು. ಬಿಡುಗಡೆಗೆ ಸಿದ್ಧವಾಗಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ನಟರಾದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗುರುವಾರ ನಡೆದ ಫ್ಯಾಷನ್ ಶೋನಲ್ಲಿ ರಣ್ವೀರ್ ಅದ್ಭುತವಾಗಿ ಎಂಟ್ರಿ ಕೊಟ್ಟರು. ಅವರು ಹೊಳೆಯುವ ಹೂವಿನ ಮುದ್ರಿತ ಜಾಕೆಟ್ ಜೊತೆಗೆ ಬಿಳಿ ಶೇರ್ವಾನಿ ಧರಿಸಿದ್ದರು.
ರ್ಯಾಂಪ್ ವಾಕ್ ಸಮಯದಲ್ಲಿ ಪತ್ನಿ ದೀಪಿಕಾ ಪಡುಕೋಣೆ ಕೆನ್ನೆಗೆ ರಣ್ವೀರ್ ಮುತ್ತಿಟ್ಟರು. ಬಳಿಕ ದೀಪಿಕಾ ಅವರ ಪಕ್ಕದಲ್ಲಿ ಕುಳಿತಿದ್ದ ಅವರ ತಾಯಿಯ ಪಾದಗಳನ್ನು ಸ್ಪರ್ಶಿಸುವ ಮೂಲಕ ಆಶೀರ್ವಾದ ಪಡೆದರು. 'ಗಲ್ಲಿ ಬಾಯ್' ನಟ ತಮ್ಮ ಹೆಂಡತಿಗೆ ಚುಂಬಿಸುತ್ತಿರುವ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ದೃಶ್ಯ ಅಭಿಮಾನಿಗಳಿಂದ ಅಪಾರ ಪ್ರೀತಿಯನ್ನು ಪಡೆಯಿತು. ಕಮೆಂಟ್ ಮೂಲಕ ಇವರಿಬ್ಬರ ಪ್ರೀತಿಯನ್ನು ವರ್ಣಿಸುತ್ತಿದ್ದಾರೆ.
ಆಫ್ ವೈಟ್ ನೆಟ್ ಸೀರೆಯಲ್ಲಿ ದೀಪಿಕಾ ಪಡುಕೋಣೆ ಸುಂದರವಾಗಿ ಕಾಣುತ್ತಿದ್ದರು. ಕಸೂತಿ ಹಾಲ್ಟರ್- ನೆಕ್ ಬ್ಲೌಸ್ ಜೊತೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಕುತ್ತಿಗೆಗೆ ಧರಿಸಿದ್ದ ವಜ್ರದ ಆಭರಣ ಅವರನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿತ್ತು. ತುಟಿಗೆ ಬಳಿದಿದ್ದ ಕ್ಲಾಸಿಕ್ ಕೆಂಪು ಲಿಪ್ಸ್ಟಿಕ್ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಮತ್ತೊಂದೆಡೆ ಆಲಿಯಾ ಭಟ್ ಬೆಳ್ಳಿ ಬಣ್ಣದ ಬೆಜ್ವೆಲ್ ಲೆಹಂಗಾವನ್ನು ಧರಿಸಿದ್ದರು. ಅದಕ್ಕೆ ಉದ್ದನೆಯ ದುಪ್ಪಟ್ಟಾವನ್ನು ಹಾಕಿದ್ದರು. ಮ್ಯಾಚ್ ಆಗುವಂತಹ ಆಭರಣಗಳೊಂದಿಗೆ ಪರಿಪೂರ್ಣ ವಧುವಿನಂತೆ ಕಾಣುತ್ತಿದ್ದರು.
ಇದನ್ನೂ ಓದಿ:Watch... ಮನೆಯಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಹೇಶ್ ಬಾಬು ಪ್ರಿನ್ಸೆಸ್ ಸಿತಾರಾ