ಹೈದರಾಬಾದ್ನಲ್ಲಿ ಗುರುವಾರ 'ಬೇಬಿ' ಚಿತ್ರತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಭಾಗವಹಿಸಿದ್ದರು. ಚಿತ್ರತಂಡಕ್ಕೆ ಹೊಗಳಿಕೆಯ ಸುರಿಮಳೆ ಹರಿಸಿದ ಅಲ್ಲು ತಮ್ಮ ಮುಂಬರುವ 'ಪುಷ್ಪ: ದಿ ರೂಲ್' ಚಿತ್ರದ ಐಕಾನಿಕ್ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳಿಗೆ ಸ್ವೀಟ್ ಸರ್ಪ್ರೈಸ್ ನೀಡಿದರು.
ಬಳಿಕ ಅನೇಕ ವಿಚಾರಗಳ ಕುರಿತು ವೇದಿಕೆಯಲ್ಲಿ ಮಾತನಾಡಿದರು. ಹಲವು ಸ್ವಾರಸ್ಯಕರ ಸಂಗತಿಗಳನ್ನು ಬಿಚ್ಚಿಟ್ಟರು. ತೆಲುಗು ಚಿತ್ರರಂಗ ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಟಾಲಿವುಡ್ ಉತ್ತಮ ಮನರಂಜನೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಹೆಣ್ಣುಮಕ್ಕಳು ಇಂತಹ ಇಂಡಸ್ಟ್ರಿಗೆ ಬರಲು ಹೆದರಬೇಡಿ. ಧೈರ್ಯದಿಂದ ಮುಂದೆ ಬನ್ನಿ ಎಂದು ಹುರಿದುಂಬಿಸಿದರು.
ಅಲ್ಲು ಅರ್ಜುನ್ ಹೇಳಿದ್ದು ಹೀಗೆ.. "ಪ್ರೀತಿಯ ನೋವನ್ನು ತೋರಿಸುವ ಚಿತ್ರಗಳು ಕಡಿಮೆ, ಅಂತಹ ಸಿನಿಮಾಗಳನ್ನು ಮಾಡುವುದು ತುಂಬಾ ಕಷ್ಟ. ಏಕೆಂದರೆ ಸಿನಿಮಾ ನೋಡಿ ಅಥವಾ ಇಂತಹ ಚಿತ್ರಕಥೆ ಪುಸ್ತಕಗಳನ್ನು ಓದಿ ಕಥೆ ಬರೆಯುವುದು ಸುಲಭವಲ್ಲ. ಬದುಕಲ್ಲಿ ನೀವು ಅನುಭವಿಸಿದ್ದರೆ, ಅಥವಾ ನೋಡಿದ್ದರೆ ಅಂತಹ ಚಿತ್ರಗಳನ್ನು ಬರೆಯಬಹುದು. ಇಂತಹ 'ಬೇಬಿ' ಯನ್ನು ಕರೆತಂದ ನಿರ್ದೇಶಕ ಸಾಯಿ ರಾಜೇಶ್ ಅವರಿಗೆ ಅಭಿನಂದನೆಗಳು"
"ಅಮೀರಪೇಟೆಯಲ್ಲಿ ಆಟೋ ಹುಡುಗರಿಗೆ ಹೇಗನಿಸುತ್ತದೆಯೋ.. ಸಿನಿಮಾ ನೋಡಿದ ಮೇಲೆ ನನಗೂ ಹಾಗೆಯೇ ಅನಿಸಿತು. ಆನಂದ್ ಇಲ್ಲದಿದ್ದರೆ ಈ ಚಿತ್ರ ಈ ರೀತಿ ಮೂಡಿಬರುತ್ತಿರಲಿಲ್ಲ. ವಿರಾಜ್ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ತೆಲುಗು ಹೀರೋಯಿನ್ಗಳು ತೆಲುಗಿನಲ್ಲಿ ಅಷ್ಟಾಗಿ ಕಾಣಿಸುವುದಿಲ್ಲವೇ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿತ್ತು. ಆದರೆ ಬೇಬಿ ಸಿನಿಮಾ ಅದನ್ನು ಸುಳ್ಳು ಮಾಡಿದೆ. ವೈಷ್ಣವಿ ಅವರು ಈ ಸಿನಿಮಾದಲ್ಲಿ ಎಲ್ಲರನ್ನೂ ಗಮನ ಸೆಳೆದಿದ್ದಾರೆ"