ಇತ್ತೀಚೆಗಷ್ಟೇ ಸೆಲ್ಫಿಯಲ್ಲಿ ಇಮ್ರಾನ್ ಹಶ್ಮಿ ಜೊತೆ ಕಾಣಿಸಿಕೊಂಡಿದ್ದ ಅಕ್ಷಯ್ ಕುಮಾರ್, ಸದ್ಯಕ್ಕೆ ತಮ್ಮ ಮುಂಬರುವ ಚಿತ್ರ ಬಡೇ ಮಿಯಾನ್ ಚೋಟೆ ಮಿಯಾನ್ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆಗೆ, ಸೋನಾಕ್ಷಿ ಸಿನ್ಹಾ ಮತ್ತು ಪೃಥ್ವಿರಾಜ್ ಸುಕುಮಾರನ್ ಮಹತ್ವದ ಪಾತ್ರ ವಹಿಸಿದ್ದಾರೆ. ಅಕ್ಷಯ್ ಕುಮಾರ್ ಇಂದು ಮುಂಜಾನೆ ತಮ್ಮ ಬ್ಯೂಸಿ ಶೂಟಿಂಗ್ ಶೆಡ್ಯೂಲ್ನ ನಡುವೆ ಕೊಂಚ ವಿರಾಮ ತೆಗೆದುಕೊಂಡು ಕೇದಾರನಾಥಕ್ಕೆ ಭೇಟಿಕೊಟ್ಟಿದ್ದಾರೆ. ಅಕ್ಷಯ್ ಕೇದಾರನಾಥ ದೇವಾಲಯದಲ್ಲಿ ದರ್ಶನ ಪಡೆದು ಹೊರಬರುತ್ತಿರುವ ವಿಡಿಯೋ ಟ್ವಿಟರ್ನಲ್ಲಿ ಹರಿದಾಡುತ್ತಿದೆ.
ಅಕ್ಷಯ್ ಅವರು ಪವಿತ್ರ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯಗಳಿಗೆ ಅಕ್ಷಯ್ ಕುಮಾರ್ ಆಗಾಗ ಭೇಟಿ ಕೊಡುತ್ತಿರುತ್ತಾರೆ. ದೇವಾಲಯಕ್ಕೆ ಭೇಟಿ ನೀಡಿದ ಅಕ್ಷಯ್ ಕುಮಾರ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸುತ್ತುವರೆದಿದ್ದಾರೆ. ಈ ಸಮಯದಲ್ಲಿ ಅವರು ಅಭಿಮಾನಿಗಳಿಗೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಈಗ ಈ ದೃಶ್ಯ ಸಾಮಾಜಿಕ ಜಾತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಅಕ್ಷಯ್ ಕುಮಾರ್ ಜೊತೆ ರಕ್ಷಣಾ ಸಿಬ್ಬಂದಿ ಇದ್ದರೂ ಸ್ಟಾರ್ ನಟನನ್ನು ಕಂಡಾಗ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಈ ವೇಳೆ, ಅಕ್ಷಯ್ ಅವರು ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.
ವೈರಲ್ ವೀಡಿಯೋದಲ್ಲಿ, ಕಪ್ಪು ಟೀ ಶರ್ಟ್ನಲ್ಲಿ ಕಂಡುಬಂದಿರುವ ನಟ, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ, ಹಣೆಯ ಮೇಲೆ ತಿಲಕವನ್ನು ಇಟ್ಟು ಕೊಂಡಿರುವುದನ್ನು ಕಾಣಬಹುದುದಾಗಿದೆ. ದೇವಾಲಯದಿಂದ ಹೊರ ಬಂದು ಕೈ ಮುಗಿದು ಹರ ಹರ ಮಹಾದೇವ್ ಎಂದು ಅಭಿಮಾನಿಗಳೆಡೆಗೆ ಘೋಷಣೆ ಕೂಗಿದ್ದಾರೆ. ಅಲ್ಲಿ ಸೇರಿದ್ದ ಜನರೂ ರಾಮ್ ಸೇತು ನಟನ ಜೊತೆಗೆ ಶಿವ ನಾಮ ಸ್ಮರಣೆ ಮಾಡಿದ್ದಾರೆ.