ಕರ್ನಾಟಕ

karnataka

ETV Bharat / entertainment

ಕನ್ನಡಕ್ಕೆ "ಲಾಠಿ" ಹಿಡಿದು ಬರುತ್ತಿದ್ದಾರೆ ಕಾಲಿವುಡ್ ಸ್ಟಾರ್ ವಿಶಾಲ್ - vishal new movie lathi

ತಮಿಳುನಟ ವಿಶಾಲ್ ಅಭಿನಯದ ಲಾಠಿ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕನ್ನಡದಲ್ಲಿಯೂ ಚಿತ್ರ ಬಿಡುಗಡೆಯಾಗುತ್ತಿದೆ.

vishal-new-movie-lathi-releases-in-kannada
ಕನ್ನಡಕ್ಕೆ "ಲಾಠಿ" ಹಿಡಿದು ಬಂದ ಕಾಲಿವುಡ್ ಸ್ಟಾರ್ ವಿಶಾಲ್

By

Published : Jun 30, 2022, 6:06 PM IST

ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಪರಭಾಷೆಯ ಸಿನಿಮಾಗಳು ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗುವ ಟ್ರೆಂಡ್ ಕೂಡ ಹೆಚ್ಚಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ತಮ್ಮ ಆ್ಯಕ್ಷನ್ ಮಾಸ್ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಟ ವಿಶಾಲ್. ಇವರು ಅಭಿನಯಿಸಿರುವ ಆ್ಯಕ್ಷನ್ ಕಥೆ ಆಧರಿಸಿರುವ ಲಾಠಿ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡದಲ್ಲಿಯೂ ಬಿಡುಗಡೆ ಆಗುತ್ತಿದೆ.

ವಿಶಾಲ್ ಅಭಿನಯದ ಲಾಠಿ ಸಿನೆಮಾ

ಬಹುತೇಕ ಚಿತ್ರೀಕರಣ ಮುಗಿಸಿರೋ ಲಾಠಿ ಸಿನಿಮಾ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿತ್ತು. ವಿಶಾಲ್ ಸಿನಿಮಾ ಎಂದಾಕ್ಷಣ ಅಲ್ಲಿ ಆ್ಯಕ್ಷನ್ ಗಳಿಗೆ ಭರವಿಲ್ಲ. ಈ ಲಾಠಿ ಚಿತ್ರದಲ್ಲೂ ಭರ್ಜರಿ ಆ್ಯಕ್ಷನ್ ಗಳಿದ್ದು, ದಕ್ಷಿಣ ಭಾರತದ ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಲಾಠಿ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.

'ಲಾಠಿ’ ಚಿತ್ರವನ್ನು ಎ. ವಿನೋದ್ ಕುಮಾರ್ ನಿರ್ದೇಶನ ಮಾಡಿದ್ದು, ವಿಶಾಲ್ ಗೆ ನಾಯಕಿಯಾಗಿ ಸುನೈನಾ ನಟಿಸಿದ್ದಾರೆ. ವಿಶಾಲ್ ಈ ವರ್ಷ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಸುಂದರ್ ಸಿ ನಿರ್ದೇಶನದ ಮದಗಜರಾಜ, ತುಪ್ಪರಿವಾಲನ್ 2, ಪಾರಸಿಗ ರಾಜ, ಮಾರ್ಕ್ ಆ್ಯಂಟೋನಿ ಚಿತ್ರಗಳು ಈ ವರ್ಷ ಬಿಡುಗಡೆಯಾಗುವ ಸಿದ್ಧತೆಯಲ್ಲಿವೆ.

ಕಾಲಿವುಡ್ ಸ್ಟಾರ್ ವಿಶಾಲ್

ಈ ಮಧ್ಯೆ ಗ್ಲೋಬಲ್ ಸ್ಪಾ ಮ್ಯಾಗ್ಜೀನ್ ಮುಖ ಪುಟದಲ್ಲಿ ವಿಶಾಲ್ ಕಾಣಿಸಿಕೊಂಡಿದ್ದು, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಸದ್ದು ಮಾಡುತ್ತಿದೆ. ಸದ್ಯ ವಿಶಾಲ್ ಅವರ ವಿವಿಧ ಭಂಗಿಯ ಫೋಟೋಶೂಟ್ ಗಳು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.

ಗ್ಲೋಬಲ್ ಸ್ಪಾ ಮ್ಯಾಗ್ಜೀನ್ ಮುಖ ಪುಟದಲ್ಲಿ ವಿಶಾಲ್

ಓದಿ :ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸೋಂ: 25 ಲಕ್ಷ ರೂ. ನೆರವು ನೀಡಿದ ನಟ ಅಮೀರ್ ಖಾನ್

ABOUT THE AUTHOR

...view details