'ಆರ್‌ಆರ್‌ಆರ್'ಭಾರತದ ಬ್ಲಾಕ್ಬಸ್ಟರ್ ಸಿನಿಮಾ. 2022ರಲ್ಲಿ ಭಾರತೀಯ ಚಿತ್ರರಂಗದ ಕೀರ್ತಿಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿದ ಸೂಪರ್ ಹಿಟ್ ಚಿತ್ರ. ವಿಶ್ವದಾದ್ಯಂತ ಸದ್ದು ಮಾಡಿ, ದೊಡ್ಡ ಮಟ್ಟಿನ ಯಶಸ್ಸಿಗೆ ಸಾಕ್ಷಿಯಾದ ಸಿನಿಮಾ. ಎಸ್‌ಎಸ್ ರಾಜಮೌಳಿ ನಿರ್ದೇಶನ ಅದ್ಭುತ ನಿರ್ದೇಶನ ಶೈಲಿ, ರಾಮ್ ಚರಣ್ - ಜೂ. ಎನ್ಟಿಆರ್ ಅಮೋಘ ಅಭಿನಯದ ಕಾಂಬಿನೇಶನ್ನಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಈಗಲೂ ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾ
ಸಂಭವನೀಯ ಸೀಕ್ವೆಲ್... ಈ ವರ್ಷದ ಆರಂಭದಲ್ಲಿ ವಿಶ್ವ ಶ್ರೇಷ್ಠ ಆಸ್ಕರ್ ವೇದಿಕೆಯಲ್ಲಿ ಆರ್‌ಆರ್‌ಆರ್ ಗೆಲುವು ಸಾಧಿಸಿದ್ದು, ಸದ್ಯ ಸಂಭವನೀಯ ಸೀಕ್ವೆಲ್ ಬಗ್ಗೆ ಸಾಕಷ್ಟು ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆದರೆ ನಿರ್ದೇಶಕ ಎಸ್‌ಎಸ್ ರಾಜಮೌಳಿ ಆಗಲಿ ಸಿನಿಮಾದ ನಾಯಕ ನಟರಾಗಲಿ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಇನ್ನೂ ಹೊರಹಾಕಿಲ್ಲ. ಚಿತ್ರದ ಬರಹಗಾರ ವಿಜಯೇಂದ್ರ ಪ್ರಸಾದ್ ಆಫ್ರಿಕಾದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರಗಳನ್ನು ಆಧರಿಸಿದ ಸೀಕ್ವೆಲ್ ಬಗ್ಗೆ ಸುಳಿವು ನೀಡಿದ್ದಾರೆ.
ಆರ್‌ಆರ್‌ಆರ್ 2: ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ತಂದೆ ಲೇಖಕ ವಿಜಯೇಂದ್ರ ಪ್ರಸಾದ್ ಅವರಿಗೆ ಆರ್‌ಆರ್‌ಆರ್ ಸೀಕ್ವೆಲ್ ಕುರಿತು ಪ್ರಶ್ನೆ ಎದುರಾಯಿತು. ತಂದೆ ಮಗ ಆರ್‌ಆರ್‌ಆರ್ 2 ನಿರ್ಮಿಸಲು ಯೋಜಿಸುತ್ತಿದ್ದೀರಾ? ಎಂದು ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಪ್ರಸಾದ್ ಅವರು, ''ಹೌದು ಮತ್ತು ಇಲ್ಲ'' ಎಂದು ಉತ್ತರಿಸಿದರು.
2022 ರಲ್ಲಿ ಆರ್‌ಆರ್‌ಆರ್ ಯಶಸ್ಸು ಕಂಡ ಬಳಿಕ ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ತಮ್ಮ ಮಗನೊಂದಿಗೆ (ನಿರ್ದೇಶಕ) ಮುಂದಿನ ಭಾಗದ ಕಲ್ಪನೆ ಹಂಚಿಕೊಂಡರು. ಕಥೆ ಆಫ್ರಿಕಾದಲ್ಲಿ ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮರಂ ಭೀಮ್ (ಜೂನಿಯರ್ ಎನ್ಟಿಆರ್) ಪಾತ್ರಗಳೊಂದಿಗೆ ಮುಂದುವರಿಯುತ್ತದೆ ಎಂಬ ಐಡಿಯಾ ಮಗನೊಂದಿಗೆ ಶೇರ್ ಮಾಡಿದರು. ನಿರ್ದೆಶಕ ರಾಜಮೌಳಿ ಅವರೂ ಕೂಡ ಈ ಐಡಿಯಾ ಇಷ್ಟಪಟ್ಟಿದ್ದಾರೆ ಮತ್ತು ಸಂಪೂರ್ಣ ಸ್ಕ್ರಿಪ್ಟ್ ಅನ್ನು ಅಭಿವೃದ್ಧಿಪಡಿಸಲು ಮಗನಲ್ಲಿ ಕೇಳಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಲೇಖಕ ವಿಜಯೇಂದ್ರ ಪ್ರಸಾದ್ ಹಂಚಿಕೊಂಡಿದ್ದಾರೆ.